ಮಂಗಳೂರು: ನಿಯಂತ್ರಣ ತಪ್ಪಿ ಕಾಲೇಜು ಕಾಂಪೌಂಡ್ ನುಗ್ಗಿದ ಕಾರು.!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ಚಾಲಕನೊಬ್ಬ ಬ್ರೇಕ್ ಬದಲು ಕ್ಲಚ್ ಅದುಮಿದ ಪರಿಣಾಮ ಕಾರೊಂದು ಕಾಲೇಜಿನ ತಡೆಗೋಡೆಯನ್ನೇ ಒಡೆದು ಕಂಪೌಂಡ್ ನೊಳಗೆ ನುಗ್ಗಿದ ಘಟನೆ ಮಂಗಳೂರಿನ ಮಣ್ಣಗುಡ್ಡದ ಗೋಕರ್ಣನಾಥ ಕಾಲೇಜು ಬಳಿ ನಡೆದಿದೆ.


ಕಾರಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ವೇಳೆ, ಚಾಲಕ ಪತಿ ಬ್ರೇಕ್ ಬದಲು ಕ್ಲಚ್ ಅದುಮಿದ್ದಾರೆ. ಪರಿಣಾಮ ಕಾರು ವೇಗವಾಗಿ ರಸ್ತೆ ಬಿಟ್ಟು ಸಂಚರಿಸಿ ಕಾಲೇಜು ಕಂಪೌಂಡ್ ಒಡೆದು ನುಗ್ಗಿದೆ.

Also Read  ಕಡಬದ 'ಡ್ರೆಸ್ ಕೋಡ್'ನಲ್ಲಿ ಪೆರ್ನಾಳ್ ಹಬ್ಬಕ್ಕೆ ಸಂಭ್ರಮಕ್ಕೆ ಸಿದ್ಧತೆ ➤ ಪುರುಷರ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ

error: Content is protected !!