ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆಗೆ ಲಂಚ ಆರೋಪ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 14. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಆಕಸ್ಮಿಕ ಮರಣಗಳಿಗೆ ನಡೆಸಲಾಗುತ್ತಿರುವ ಮರಣೋತ್ತರ ಶವ ಪರೀಕ್ಷೆ ಸಂದರ್ಭ ಇಲ್ಲಿನ ಸಿಬ್ಬಂದಿಗಳು ಅನಧಿಕೃತ ಹಣ ವಸೂಲಿ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪುತ್ತೂರು ಶಾಸಕರಿಗೆ ದೂರು ನೀಡಲಾಗಿದೆ.

ಆಕಸ್ಮಿಕ ಮರಣಗಳು ಸಂಭವಿಸಿದಾಗ ಶವಪರೀಕ್ಷೆ ಅನಿವಾರ್ಯ. ಈ ಸಂದರ್ಭ ಸಿಬ್ಬಂದಿಗಳು 2ರಿಂದ 3 ಸಾವಿರ ರೂ.ಗಳನ್ನು ಕೇಳುತ್ತಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಮೃತದೇಹವನ್ನು ಆಸ್ಪತ್ರೆಯಲ್ಲಿಟ್ಟು ಕಾಯುವ ವಾರಿಸುದಾರರು ಹಣ ನೀಡದೇ ಇದ್ದಲ್ಲಿ ಇನ್ನಷ್ಟು ತೊಂದರೆ ನೀಡಬಹುದು ಎಂದು ಹೆದರಿ ಹಣ ನೀಡಬೇಕಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ವಿನಂತಿಸಲಾಗಿದೆ.

Also Read  ಪುತ್ತೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾಮೂಹಿಕ ಪ್ರತಿಭಟನೆ

error: Content is protected !!