(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಕರ್ನಾಟಕ ವಿದ್ಯುತ್ ನಿಯಂತ್ರಣ ಯೋಗವು ಎಪ್ರಿಲ್ ನಿಂದ ಜಾರಿಗೆ ಬರುವಂತೆ ವಿದ್ಯುತ್ ದರದಲ್ಲಿ ಯುನಿಟ್ ಗೆ ತಲಾ 7ರೂ. ಏರಿಕೆ ಮಾಡಿದ್ದು ಖಂಡನೀಯ. ಇದನ್ನು ತಕ್ಷಣ ಕೈಬಿಡಬೇಕೆಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.
100 ಯುನಿಟ್ ಗಿಂತ ಅಧಿಕ ಬಳಸುವ ಗ್ರಾಹಕರು ಎಪ್ರಿಲ್ ನಿಂದ ಜುಲೈಯೊಳಗೆ ಬಡ್ಡಿ ಮತ್ತು ಅಸಲು ಸೇರಿ ಸಾವಿರ ರೂ.ಗಳ ಬಿಲ್ ಹೊರೆಯನ್ನು ಭರಿಸಬೇಕಾಗುತ್ತದೆ. ಹಾಗಾಗಿ ಸರಕಾರ ತಕ್ಷಣ ವಿದ್ಯುತ್ ದರ ಹಿಂಪಡೆಯಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಆಗ್ರಹಿಸಿದ್ದಾರೆ.