ಮುರುಡೇಶ್ವರ ಬೀಚ್ ಗೆ ತೆರಳಿದ್ದ ಓರ್ವ ಸಮುದ್ರ ಪಾಲು   ➤ ಓರ್ವ ಸಮುದ್ರ ಪಾಲು

(ನ್ಯೂಸ್ ಕಡಬ)newskadaba.com  ಭಟ್ಕಳ, ಜೂ . 13. ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದ ತಂಡವೊಂದು ಕಡಲಿಗೆ ಇಳಿದ ವೇಳೆ ಓರ್ವ ನೀರು ಪಾಲಾದ ಘಟನೆ ನಡೆದಿದೆ.

ಮೃತ ಯುವಕನನ್ನು ಸಂತೋಷ ಹುಲಿಗುಂಡೆ (19) ಎಂದು ಗುರುತಿಸಲಾಗಿದೆ, ಹಸನ್ ಮಜಗಿಗೌಡ (21) ಹಾಗೂ ಸಂಜೀವ ಹೆಬ್ಬಳ್ಳಿ (20) ಎನ್ನುವರನ್ನು ರಕ್ಷಣೆ ಮಾಡಲಾಗಿದೆ.ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಜನರ ಗುಂಪೊಂದು ಸಿಗಂದೂರು, ಕೊಲ್ಲೂರು ಪ್ರವಾಸ ಮುಗಿಸಿ ಮುರುಡೇಶ್ವರಕ್ಕೆ ಆಗಮಿಸಿದ್ದ ವೇಳೆ ಸಮುದ್ರದ ಅಲೆಯನ್ನು ಲೆಕ್ಕಿಸದೇ ಸಮುದ್ರಕ್ಕಿಳಿದು ಆಟವಾಡುವ ವೇಳೆ ಮೂವರು ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು.ಕಳೆದ ಮೂರ್ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಬಿಪರ್‌ಜೋಯ್ ಚಂಡಮಾರುತ ತೀವ್ರಗೊಳ್ಳುತ್ತಿದ್ದು, ಚಂಡಮಾರುತದ ಸಮಯದಲ್ಲಿ ಸಮುದ್ರಕ್ಕೆ ಸಮೀಪಿಸದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

Also Read  ಆಲಂಕಾರು: ಸಾಮಾನ್ಯ ಸಭೆ ► ಅಕ್ರಮ ಅಂಗಡಿಗಳ ತೆರವಿಗೆ ನಿರ್ಣಯ

error: Content is protected !!
Scroll to Top