ಮಂಗಳೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ – ಕರ್ತವ್ಯಕ್ಕೆ ಅಡ್ಡಿ ಆರೋಪ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 13. ಸಂಚಾರಿ ಪೊಲೀಸ್ ಸಿಬ್ಬಂದಿಗೆ ಹಲ್ಲೆಗೈದು, ಅವಾಚ್ಯವಾಗಿ ನಿಂದನೆಗೈದ ಆರೋಪಕ್ಕೆ ಸಂಬಂಧಿಸಿ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಚಾರಿ ಪೊಲೀಸ್ ಸಿಬ್ಬಂದಿ ರಮೇಶ್ ಎನ್ನುವವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆ ನಡೆಸಲಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಸಿಟಿ ಸೆಂಟರ್ ರಿಕ್ಷಾ ಪಾರ್ಕಿಂಗ್ ಎದುರುಗಡೆ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿ ರಮೇಶ್ ರವರು ಟ್ರಾಫಿಕ್ ತೆರವು ಮಾಡುತ್ತಿದ್ದ ವೇಳೆ, ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಬ್ದುಲ್ ರೆಹಮಾನ್ ಎಂಬಾತ ಅವಾಚ್ಯವಾಗಿ ಬೈದು ಪೊಲೀಸ್ ಸಮವಸ್ತ್ತವನ್ನು ಕೈಯಿಂದ ಎಳೆದು ಎದೆ ಭಾಗಕ್ಕೆ ಮುಷ್ಟಿಯಿಂದ ಗುದ್ದಿ ನೋವನ್ನುಂಟು ಮಾಡಿದ್ದಾರೆಂದು ಪೊಲೀಸ್ ಸಿಬ್ಬಂದಿ ಆರೋಪಿಸಿದ್ದಾರೆ. ಇದೀಗ ಆರೋಪಿ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿ ಹಲ್ಲೆ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group