(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.20. ಯುವತಿಯೋರ್ವಳು ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಾಯಿಯ ಬೀರಿಗ ನಿವಾಸಿ ಲೀಲಾವತಿ ಯಾನೆ ಲಿಖಿತಾ (19) ನಾಪತ್ತೆಯಾದ ಯುವತಿ. ಈಕೆ ಕೌಕ್ರಾಡಿ ಗ್ರಾಮದ ಕೊಕ್ಕಡದ ತುಕ್ರಪ್ಪ ಶೆಟ್ಟಿ ಎಂಬವರ ಮನೆಯಲ್ಲಿ ಕೂಲಿ ಕೆಲಸಕ್ಕಿದ್ದು, ಅಲ್ಲಿಂದ ಜನವರಿ 15 ರಂದು ಮಧ್ಯಾಹ್ನ ನಾಪತ್ತೆಯಾಗಿದ್ದಾಳೆ. ಈಕೆಗಾಗಿ ಈಕೆಯ ಮನೆಯವರು ತಮ್ಮ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು, ಆದರೂ ಈಕೆಯ ಪತ್ತೆಯಾಗಿಲ್ಲ. ಈ ಬಗ್ಗೆಯೂ ತುಕ್ರಪ್ಪ ಶೆಟ್ಟಿಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.