(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 09. ಸೌದಿ ಅರೇಬಿಯಾದಲ್ಲಿ ವೃತ್ತಿಯಲ್ಲಿದ್ದ ಮಾಣಿ ಸಮೀಪದ ಸೂರಿಕುಮೇರು ನಿವಾಸಿ ದಿವಂಗತ ಅಬೂಬಕರ್ ರವರ ಪುತ್ರ ಅಬ್ದುಲ್ ರಝಾಕ್ ಎಂಬವರು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.
ಕಳೆದ 15 ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ವೃತ್ತಿಯಲ್ಲಿದ್ದ ಅವರು ರಜೆಯಲ್ಲಿ ಮನೆಗೆ ಬಂದು 3 ತಿಂಗಳ ಹಿಂದೆಯಷ್ಟೇ ಮರಳಿ ವಿದೇಶಕ್ಕೆ ತರಳಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.