(ನ್ಯೂಸ್ ಕಡಬ) newskadaba.com ತುಮಕೂರು, ಜೂ. 09. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಎಎಸ್ಐ ಸಹಿತ ಇಬ್ಬರು ಪೊಲೀಸರನ್ನು ಅಮಾನತು ಮಾಡಿರುವ ಕುರಿತು ವರದಿಯಾಗಿದೆ.
ಕಳ್ಳಂಬೆಳ್ಳ ಠಾಣೆಯ ಎಎಸ್ಐ ಚಿದಾನಂದ ಸ್ವಾಮಿ ಮತ್ತು ಜೀಪು ಚಾಲಕ ಚಿಕ್ಕಹನುಮಯ್ಯ ಎಂಬವರು ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಶಿರಾ ಠಾಣಾ ಇನ್ಸ್ಪೆಕ್ಟರ್ ನೀಡಿರುವ ದೂರಿನಂತೆ ಎಸ್ಪಿ ರಾಹುಲ್ ಕುಮಾರ್ ಇಬ್ಬರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.