(ನ್ಯೂಸ್ ಕಡಬ) newskadaba.com ಮಂಗಳೂರು, ಜ.20. ರಾಷ್ಟ್ರೀಯ ಹೆದ್ದಾರಿ-48 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟಿ ಭಾಗದ ಸರಪಳಿ ಕಿ.ಮೀ.250.620 (ಕೆಂಪುಹೊಳೆ ಗೆಸ್ಟ್ ಹೌಸ್) ನಿಂದ 263.00 (ಅಡ್ಡಹೊಳೆ) ರವರೆಗಿನ ರಸ್ತೆ ಅಭಿವೃದ್ದಿಪಡಿಸುವ ಹಿನ್ನೆಲೆಯಲ್ಲಿ ಈಗ ಉದ್ದೇಶಿಸಲಾಗಿರುವ ರಸ್ತೆ ಕಾಮಗಾರಿಯನ್ನು ನಿರ್ವಹಿಸಲು ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ ಕಿ.ಮೀ. 238.950 (ಮಾರನಹಳ್ಳಿ ಪೋಲೀಸ್ ಔಟ್ ಪೋಸ್ಟ್ ಕಾಡುಮನೆ ಎಸ್ಟೇಟ್ ರೋಡ್ ಜಂಕ್ಷನ್) ರಿಂದ ಪುತ್ತೂರು ತಾಲೂಕಿನ ಗುಂಡ್ಯ ಹೆದ್ದಾರಿ ಕಿ.ಮೀ. 261.500ವರೆಗೆ ಶಿರಾಡಿಘಾಟ್‍ನ ರಸ್ತೆಯಲ್ಲಿ ಇಂದು ಜನವರಿ 20 ಬೆಳಿಗ್ಗೆ 6 ಘಂಟೆಯಿಂದ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಅಥವಾ ಮುಂದಿನ ಆದೇಶದವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಆದೇಶ ಹೊರಡಿಸಿದೆ.
ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸುವ ನಿಮಿತ್ತ ಲಘು ವಾಹನಗಳು (ಸಾಮಾನ್ಯ ಬಸ್ಸುಗಳು, ಜೀಪು, ವ್ಯಾನು, ಎಲ್.ಸಿ.ವಿ. (ಮಿನಿ ವ್ಯಾನ್) ದ್ವಿಚಕ್ರ ವಾಹನಗಳು) ಹಾಸನ-ಬೇಲೂರು(ರಾಜ್ಯ ಹೆದ್ದಾರಿ-57)-ಮೂಡಿಗೆರೆ-ಚಾರ್ಮುಡಿಘಾಟ್- ಬೆಳ್ತಂಗಡಿ-ಉಜಿರೆ- ಬಿ.ಸಿ.ರೋಡು (ರಾಷ್ಟ್ರೀಯ ಹೆದ್ದಾರಿ 234)- ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75), ಹಾಸನ-ಸಕಲೇಶಪುರ-ಆನೆಮಹಲ್ (ರಾಷ್ಟ್ರೀಯ ಹೆದ್ದಾರಿ-75) ಹಾನ್‍ಬಾಳ್-ಜೆನ್ನಾಪುರ(ರಾಜ್ಯ ಹೆದ್ಸಾರಿ-27) ಮೂಡಿಗೆರೆ-ಚಾರ್ಮುಡಿ ಘಾಟ್-ಬೆಳ್ತಂಗಡಿ -ಉಜಿರೆ-ಬಿ.ಸಿ.ರಸ್ತೆ (ರಾಷ್ಟ್ರೀಯ ಹೆದ್ದಾರಿ 234)-ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75), ಬೆಂಗಳೂರು-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ- ಕಳಸ-ಕುದುರೆಮುಖ- ಮಾಲಘಾಟ್-ಕಾರ್ಕಳ-ಉಡುಪಿ, ಮಂಗಳೂರು-ಬಿ.ಸಿ.ರಸ್ತೆ ಮಾಣಿ(ರಾಷ್ಟ್ರೀಯ ಹೆದ್ದಾರಿ 75)-ಪುತ್ತೂರು-ಮಡಿಕೇರಿ-ಹುಣಸೂರು(ರಾಷ್ಟ್ರೀಯ ಹೆದ್ದಾರಿ 275) -ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು, ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ ಮಾಸ್ತಿಕಟ್ಟೆ-ಬಾಳೆಬಾರೆಘಾಟ್-ಹೊಸಂಗಡಿ ಸಿದ್ದಾಪುರ-ಕುಂದಾಪುರ ಮಾರ್ಗದಲ್ಲಿ ಚಲಿಸಬಹುದು.
ಭಾರಿ ವಾಹನಗಳು ( ರಾಜಹಂಸ, ಐರಾವತ ಬಸ್ಸುಗಳು ಮತ್ತು ಖಾಸಗಿ ಲಕ್ಸುರಿ ಬಸ್ಸುಗಳು ಮತ್ತು ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೊ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು) ಮಂಗಳೂರು-ಬಿ.ಸಿ.ರೋಡು- ಮಾಣಿ(ರಾಷ್ಟ್ರೀಯಹೆದ್ದಾರಿ75)-ಪುತ್ತೂರು- ಮಡಿಕೇರಿ ಹುಣಸೂರು (ರಾಷ್ಟ್ರೀಯ ಹೆದ್ದಾರಿ-275)-ಕೆ.ಆರ್.ನಗರ-ಹೊಳೆನರಸಿಪುರ-ಹಾಸನ (ರಾಜ್ಯ ಹೆದ್ದಾರಿ 57), ಮಂಗಳೂರು-ಬಿ.ಸಿ.ರಸ್ತೆ, ಮಾಣಿ(ರಾಷ್ಟ್ರೀಯಹೆದ್ದಾರಿ-75) – ಪುತ್ತೂರು – ಮಡಿಕೇರಿ -ಹುಣಸೂರು (ರಾಷ್ಟ್ರೀಯ ಹೆದ್ದಾರಿ 275)-ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು, ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ, ಮಾಸ್ತಿಕಟ್ಟೆ-ಬಾಳೆಬಾರೆಘಾಟ್ ಹೊಸಂಗಡಿ ಸಿದ್ದಾಪುರ-ಕುಂದಾಪುರ, ಬೆಂಗಳೂರು-ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ-ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು ಮಾರ್ಗದಲ್ಲಿ ಚಲಿಸಬಹುದು.