ಪ್ರವಾಸಿಗರ ರಕ್ಷಣೆಗೆ ನಮ್ಮ ಆಧ್ಯತೆ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 08. ಮಂಗಳೂರಿನ ಸುಂದರ ಮನಮೋಹಕ ಕಡಲತೀರಕ್ಕೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇವರಿಗೆ ಸಮುದ್ರದ ಆಳ, ಸೆಳೆತ ಮತ್ತು ಅಪಾಯದ ಅರಿವಿರುವುದಿಲ್ಲ. ಮೋಜು ಮಸ್ತಿಗಾಗಿ ಕಡಲಿಗೆ ಇಳಿದು ಅಪಾಯವನ್ನು ಮೈಗೆಳೆದುಕೊಳ್ಳುತ್ತಾರೆ. ಅವರನ್ನು ಎಚ್ಚರಿಸಿ, ಮಳೆಗಾಲದಲ್ಲಿ ಕಡಲಿಗಿಳಿಯದಂತೆ ಮಾಡುವ ಹೊಣೆಗಾರಿಕೆ ಬೀಚ್‍ ಗಾರ್ಡ್‍ಗಳಾಗಿ ಕೆಲಸ ಮಾಡುವ ಹೋಮ್‍ ಗಾರ್ಡ್‍ಗಳಿಗೆ ಇದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಎಲ್ಲಾ ಎಂಟು ಬೀಚ್‍ಗಳಿಗೆ ಜಿಲ್ಲಾಧಿಕಾರಿಯವರ ಆದೇಶದಂತೆ ಬೀಚ್‍ಗಾರ್ಡ್ ನೇಮಕ ಮಾಡಲಾಗಿದೆ ಎಂದು ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.

Also Read  ಮಂಗಳೂರು: ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ಹತ್ಯೆ ಕೇಸ್ ➤ಆರೋಪಿಗಾಗಿ ಮುಂದುವರಿದ ಶೋಧ

ಬುಧವಾರದಂದು ಡಾ|| ಮುರಲೀ ಮೋಹನ್ ಚೂಂತಾರು ಅವರು  ತಣ್ಣೀರುಬಾವಿ, ಸುರತ್ಕಲ್, ಸಸಿಹಿತ್ಲು ಬೀಚ್‍ಗಳಿಗೆ ಭೇಟಿ ನೀಡಿ ಬೀಚ್‍ಗಾರ್ಡ್‍ಗಳಾಗಿ ಕೆಲಸ ಮಾಡುವ ಗೃಹರಕ್ಷಕರಿಗೆ ಮಾರ್ಗದರ್ಶನ ನೀಡಿದರು. ಮುಂದಿನ ಮೂರು ದಿನಗಳ ಕಾಲ ಜಾಸ್ತಿ ಮಳೆ ಬರುವ ಸಾಧ್ಯತೆ ಇರುವುದರಿಂದ ಗೃಹ ರಕ್ಷಕರು ಹೆಚ್ಚು ಜಾಗರೂಕತೆ ವಹಿಸಬೇಕು ಎಂದು ಆದೇಶ ನೀಡಿದರು. ಈ ಸಂದರ್ಭದಲ್ಲಿ ಸುರತ್ಕಲ್ ಘಟಕಾಧಿಕಾರಿ ಶ್ರೀ ರಮೇಶ್, ಹಿರಿಯ ಗೃಹರಕ್ಷಕರಾದ  ಶ್ರೀ ಸುನಿಲ್ ಕುಮಾರ್, ರಾಜೇಶ್ ಗಟ್ಟಿ, ದಿವಾಕರ್, ಕನಕಪ್ಪ, ಅರವಿಂದ್, ಮನೋರಮ, ನಿಖಿಲ್, ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!
Scroll to Top