(ನ್ಯೂಸ್ ಕಡಬ)newskadaba@gmail.com ಬೆಂಗಳೂರು:(ಜೂ.06) ಇಂಧನ ಸಚಿವರಿಂದ ಸ್ಪಷ್ಟನೆ ಬಾಡಿಗೆ ದಾರರಿಗು 200ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಎಷ್ಟು ವರ್ಷದಿಂದ ಬಾಡಿಗೆ ಮನೆಯಲ್ಲಿ ಇದ್ದೇವೆ ಎಂಬ ದಾಖಲೆಗಳು ಇರಬೇಕು. ಮನೆ ಮಾಲೀಕ ತೆರಿಗೆ ಕಟ್ಟಿರಬೇಕು ಹಾಗೂ ಕರೆಂಟ್ ಬಿಲ್ ಮತ್ತು ಅಗ್ರಿಮೆಂಟ್ ಇರಬೇಕು.ಈ ಎಲ್ಲ ಷರತ್ತುಗಳು ಅನ್ವಯ ವಾಗುತ್ತದೆ. ಪ್ರಯೋಜನವನ್ನು ಪಡೆಯಲು ಇಚ್ಚಿಸುವ ಗ್ರಾಹಕರು ‘ಸೇವಾ ಸಿಂಧು’ ಮೂಲಕ ಅರ್ಜಿ ಸಲ್ಲಿಸಬೇಕು.
2022-2023ರ ಹಣಕಾಸು ವರ್ಷದಲ್ಲಿ 12 ತಿಂಗಳ ಸರಾಸರಿ ಬಳಕೆ ಮತ್ತು ಶೇಕಡಾ 10ರಷ್ಟು ಹೆಚ್ಚಿನ ವಿದ್ಯುತ್ ಬಳಕೆ 200 ಯೂನಿಟ್ ಗಳನ್ನು ಮೀರದಿದ್ದರೆ ಪ್ರಯೋಜನವನ್ನು ಪಡೆಯಲು ಅರ್ಹರಾಗಿದ್ದು.
200 ಯೂನಿಟ್ ದಾಟಿದ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ.