ನಾಳೆ (ಜೂ.03) ಎಡಮಂಗಲದಲ್ಲಿ ನಡೆಯಬೇಕಿದ್ದ ‘ಮಹಿಷಾವಧೆ’ ಯಕ್ಷಗಾನ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ಶಿಥಿಲಗೊಂಡಿದ್ದ ಪುಳಿಕುಕ್ಕು ತರವಾಡು ಧರ್ಮದೈವಗಳ ದೈವಸ್ಥಾನದ ಅಭಿವೃದ್ಧಿಯ ಸಹಾಯಾರ್ಥವಾಗಿ ನಾಳೆ (ಜೂನ್ 03) ರಂದು ಶಿವ ಪಾರ್ವತಿ ಸಭಾಭವನ ಶ್ರೀ ಕ್ಷೇತ್ರ ಎಡಮಂಗಲದಲ್ಲಿ ನಡೆಯಬೇಕಿದ್ದ ‘ಮಹಿಷಾವಧೆ’ ಯಕ್ಷಗಾನ ಬಯಲಾಟವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಮುಂದಿನ ದಿನಾಂಕವನ್ನು ನಿಗದಿಪಡಿಸಿ ತಿಳಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7411797582 ಅಥವಾ 9740460508 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!
Scroll to Top