ಮೊದಲ ಗ್ಯಾರಂಟಿಯಾಗಿ ‘ಗೃಹ ಜ್ಯೋತಿ’ ಯೋಜನೆ ಜಾರಿ- ಜುಲೈ 01ರಿಂದ 200 ಯುನಿಟ್ ವಿದ್ಯುತ್ ಫ್ರೀ ➤ ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು- ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 02. ಚುನಾವಣಾ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದಿದ್ದ ಕಾಂಗ್ರೆಸ್, ಈ ಆರ್ಥಿಕ ವರ್ಷದಲ್ಲಿ 5 ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧಾರ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಮಾತನಾಡಿದ ಅವರು, ರಾಜ್ಯದ ಯಾವುದೇ ಜಾತಿ, ಧರ್ಮ, ಭಾಷೆ ನೋಡದೇ ಈ ಯೋಜನೆಗಳನ್ನು ತಲುಪಿಸುತ್ತೇವೆ. ಮೊದಲ ಗ್ಯಾರಂಟಿಯಾಗಿ ‘ಗೃಹ ಜ್ಯೋತಿ‘ ಯೋಜನೆ ಜಾರಿ ಮಾಡಲಾಗಿದೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಬಳಿಕ ಶೇ. 10 ರಷ್ಟು ವಿದ್ಯುತ್‌ ಉಚಿತ ನೀಡಲಾಗುವುದು. 200 ಯೂನಿಟ್‌ ವರೆಗೆ ವಿದ್ಯುತ್‌ ಉಚಿತ ಘೋಷಣೆಯಾಗಿದೆ. ಈ ಹಿಂದಿನ ಹಳೇ ವಿದ್ಯುತ್‌ ಬಾಕಿಯನ್ನು ಗ್ರಾಹಕರೇ ಪಾವತಿ ಮಾಡಬೇಕು ಸಿಎಂ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Also Read  ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್ ➤‌ 14 ದಿನಗಳ ನ್ಯಾಯಾಂಗ ಬಂಧನ

error: Content is protected !!
Scroll to Top