ಎಸ್‌ಡಿಪಿಐ ಅಮ್ಮುಂಜೆ ವಲಯಾಧ್ಯಕ್ಷರ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.21. ಎಸ್‌ಡಿಪಿಐ ಅಮ್ಮುಂಜೆ ವಲಯಾಧ್ಯಕ್ಷ ಮಲ್ಲೂರು ಅಮ್ಮುಂಜೆಯ ಕಲಾಯಿ ನಿವಾಸಿ ಅಶ್ರಫ್(35) ಎಂಬವರನ್ನು ಮಾರಕಾಯುಧಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಜನಪದವಿನ ಕರಾವಳಿ ಕಾಲೇಜು ಬಳಿ ಇಂದು ಬೆಳಗ್ಗೆ ನಡೆದಿದೆ.

ಕಲಾಯಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅಶ್ರಫ್
ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ಬೆಳಗ್ಗೆ ಕಲಾಯಿಯಲ್ಲಿ ಧ್ವಜಾರೋಹಣ ನೆರೆವೇರಿಸಿದ ಬಳಿಕ ಹದಗೆಟ್ಟಿದ್ದ ಕಲಾಯಿ ರಸ್ತೆಯನ್ನು ಸಾರ್ವಜನಿಕರೊಂದಿಗೆ ಸೇರಿ ಶ್ರಮದಾನ ಮಾಡಿ, ನಂತರ
ತನ್ನ ರಿಕ್ಷಾದಲ್ಲಿ ಬಾಡಿಗೆಗೆಂದು ಕಳ್ಳಿಗೆ ಗ್ರಾಮದ ಬೆಂಜನಪದವಿನ ಕರಾವಳಿ ಸೈಟ್ ಎಂಬಲ್ಲಿಗೆ ತೆರಳಿದ್ದ ವೇಳೆ ಮೂರು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ತಲವಾರಿನಿಂದ ಭೀಕರವಾಗಿ ಕೊಚ್ಚಿ ಕೊಲೆ‌ಮಾಡಿ ಪರಾರಿಯಾಗಿದ್ದಾರೆ‌.

Also Read  ಬಿಹಾರದಲ್ಲಿ ಪಾಕ್ ಪರ ಘೋಷಣೆ ➤ ಐವರ ಬಂಧನ

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

error: Content is protected !!
Scroll to Top