ಸಂಪ್‌ನಲ್ಲಿ ಉದ್ಯಮಿ ಪುತ್ರನ ಮೃತದೇಹ ಪತ್ತೆ.!

(ನ್ಯೂಸ್ ಕಡಬ)newskadaba.com ಮೈಸೂರು,ಮೇ.29 ಉದ್ಯಮಿಯೊಬ್ಬರ ಪುತ್ರನ ಶವ ವಿಜಯನಗರ ವಾಟರ್ ಟ್ಯಾಂಕ್ ಬಳಿಯ ನಿರ್ಮಾಣ ಹಂತದ ಕಟ್ಟಡದ ಸಂಪ್ನಲ್ಲಿ ಪತ್ತೆಯಾಗಿದೆ.ಮೃತರನ್ನು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಕೆ.ಎಂ. ಚೆರಿಯನ್ ಅವರ ಪುತ್ರ ಕ್ರಿಸ್ಟೋ ಚೆರಿಯನ್ (35) ಎಂದು ಗುರುತಿಸಲಾಗಿದೆ.

ಮಾಹಿತಿ ತಿಳಿದ ಪೊಲೀಸರು ಶ್ವಾನದಳ, ವಿಧಿವಿಜ್ಞಾನ ತಜ್ಞರ ತಂಡದ ಜೊತೆಗೆ ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಹೊರತೆಗೆದಿದ್ದಾರೆ. ಪೋಷಕರು ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Also Read  ?? ➤➤ Big Breaking News ಮರ್ಧಾಳ: ಟಿಪ್ಪರ್ ಹಾಗೂ ಮಹೀಂದ್ರಾ ಜೀತೋ ನಡುವೆ ಭೀಕರ ಅಪಘಾತ ➤ ಅರ್ಧತಾಸು ವಾಹನದೊಳಗೆ ಸಿಲುಕಿದ್ದ ಚಾಲಕ ಗಂಭೀರ

 

error: Content is protected !!
Scroll to Top