ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ಅರೆಸ್ಟ್.!

(ನ್ಯೂಸ್ ಕಡಬ)newskadaba.comವದೆಹಲಿ,ಮೇ.26 ಪ್ರಧಾನಿ ನರೇಂದ್ರ ಮೋದಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯೊಬ್ಬ ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಬೆದರಿಕೆ ಹಾಕಿದ್ದು, ಬೆದರಿಕೆ ಕರೆ ಪೊಲೀಸ್ ಇಲಾಖೆಯಲ್ಲಿ ಕೋಲಾಹಲವನ್ನು ಉಂಟುಮಾಡಿದೆ.

ಪೊಲೀಸರು ಕರೆಯನ್ನು ಪತ್ತೆಹಚ್ಚಲು ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ. ಕರೆಯನ್ನು ಪತ್ತೆಹಚ್ಚಿದ ನಂತರ ಪೊಲೀಸರು ದೆಹಲಿಯ ಪ್ರಸಾದ್ ನಗರ ಪ್ರದೇಶದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ದೆಹಲಿಯ ರಾಯಗ್ಪುರ ನಿವಾಸಿ ಹೇಮಂತ್ ಎಂದು ಗುರುತಿಸಲಾಗಿದ್ದು, ಆತ ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಚುನಾವಣೆ ಗೆಲುವಿಗೆ ಸಂಬಂಧಿಸಿದಂತೆ ಪಣ ಕಟ್ಟಿಕೊಂಡ ರೈತರು.!   ➤ತಲಾ ಒಂದು ಎಕರೆ ಜಮೀನನ್ನು ಜಿದ್ದಿಗೆ!

 

 

error: Content is protected !!
Scroll to Top