ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಶಿಕ್ಷಕಿಯರು.!➤ ವೃತ್ತಿಯಿಂದ ಅಮಾನತು

(ನ್ಯೂಸ್ ಕಡಬ)newskadaba.com ಬಿಹಾರ,ಮೇ.26  ಸರ್ಕಾರಿ ಶಾಲೆಯ ಪ್ರಾಂಶುಪಾಲೆ ಹಾಗೂ ಶಿಕ್ಷಕಿ, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಸಮ್ಮುಖದಲ್ಲೇ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಆಘಾತಕಾರಿ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯ ಕೌರಿಯ ಪಂಚಾಯಿತಿ ವ್ಯಾಪ್ತಿಯಲ್ಲಿನ ಬೀಳ್ತಾ ಮಿಡಲ್ ಸ್ಕೂಲ್ ನಲ್ಲಿ ನಡೆದಿದೆ.

ಮೊದಲಿಗೆ ಶಿಕ್ಷಕಿ ಮೇಲೆ ಕ್ಲಾಸ್ ರೂಮ್ ಒಳಗೆ ಹಲ್ಲೆ ನಡೆದಿದ್ದು, ಆಕೆ ತರಗತಿಯಿಂದ ಹೊರಗೆ ಬರಲು ಮುಂದಾಗಿದ್ದಾರೆ. ಮತ್ತೊಬ್ಬಾಕೆ ಕೈಯಲ್ಲಿ ಚಪ್ಪಲಿ ಹಿಡಿದು ಆಕೆಯನ್ನು ಬೆನ್ನಟ್ಟಿದ್ದು ಬಳಿಕ ತರಗತಿಯ ಹೊರಗೆ ನೆಲದ ಮೇಲೆ ಬಿದ್ದು ಕುಸ್ತಿ ಮಾಡಿದ್ದಾರೆ. ಹೀಗೆ ಫೈಟ್ ಮಾಡಿದ ಶಿಕ್ಷಕಿಯರನ್ನು ಅನಿತಾ ಕುಮಾರಿ ಹಾಗೂ ಕಾಂತಾ ಕುಮಾರಿ ಎಂದು ಗುರುತಿಸಲಾಗಿದೆ.

Also Read  ಟ್ರಕ್ ಚಾಲಕರರೊಂದಿಗೆ ಪ್ರಯಾನಣಿಸಿ, ಸಮಸ್ಯೆ ಅಲಿಸಿದ ರಾಹುಲ್ ಗಾಂಧಿ

ಕ್ಷೇತ್ರ ಶಿಕ್ಷಣಾಧಿಕಾರಿಗಳು ಘಟನೆಯನ್ನು ಖಚಿತಪಡಿಸಿದ್ದು, ಪ್ರಾಂಶುಪಾಲೆ ಹಾಗೂ ಶಿಕ್ಷಕಿಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಭಾವಿ ಪ್ರಜೆಗಳನ್ನು ರೂಪಿಸಬೇಕಾದ ಶಿಕ್ಷಕರೇ ಈ ರೀತಿ ಹೊಡೆದಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

 

 

error: Content is protected !!