ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು‌.!➤ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.26  ನಗರದ ಲಗ್ಗೆರೆ ಬಳಿಯ ಚೌಡೇಶ್ವರಿನಗರದಲ್ಲಿ ರವಿಕುಮಾರ್ ಅಲಿಯಾಸ್ ಮತ್ತಿ ರವಿ (38) ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ‌ ಮಾಡಲಾಗಿದೆ.ಸ್ಥಳೀಯ ನಿವಾಸಿ ರವಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಕಾಂಗ್ರೆಸ್ ಪಕ್ಷದ ಮುಖಂಡರೂ ಆಗಿರುವ ಫೈನಾನ್ಶಿಯರ್ ಕೃಷ್ಣಮೂರ್ತಿ ಅವರ ಜನ್ಮದಿನವಿತ್ತು.

ಸ್ನೇಹಿತರು ರಾತ್ರಿ ಏರ್ಪಡಿಸಿದ್ದ ಪಾರ್ಟಿಯಲ್ಲಿ ರವಿ ಪಾಲ್ಗೊಂಡಿದ್ದರು. ಊಟದ ಸಮಯದಲ್ಲಿ ಎರಡು ಗುಂಪಿನ ನಡುವೆ ಗಲಾಟೆ ಆಗಿತ್ತು. ಪರಸ್ಪರ ವೈಷಮ್ಯ ಬೆಳೆದಿತ್ತು.’ನಂತರ ಮಾರಕಾಸ್ತ್ರಗಳಿಂದ ಹೊಡೆದು ರವಿ ಅವರನ್ನು ಕೊಂದು ಆರೋಪಿಗಳು ಪರಾರಿಯಾಗಿದ್ದಾರೆ.ಪತ್ನಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Also Read  ಅರಣ್ಯದಲ್ಲಿನ ಬೆಂಕಿ ಅವಘಡಗಳಿಗೆ ಭೂ ಸಮಸ್ಯೆಯೇ ಕಾರಣ  

 

 

 

error: Content is protected !!