ನೌಕರರಿಗೆ ಸಿಹಿ ಸುದ್ದಿ➤ರಜೆ ನಗರೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ.!

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.26 ರಜೆ ನಗರೀಕರಣ ತೆರಿಗೆ ವಿನಾಯಿತಿ ಮಿತಿ 25 ಲಕ್ಷ ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಖಾಸಗಿ ವಲಯದ ನೌಕರರು ನಿವೃತ್ತಿ ವೇಳೆ ಪಡೆಯುವ ರಜೆ ನಗದೀಕರಣಕ್ಕೆ ಪಡೆಯಬಹುದಾದ ತೆರಿಗೆ ವಿನಾಯಿತಿ ಮೊತ್ತವನ್ನು 3 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಬಜೆಟ್ ನಲ್ಲಿ ಈ ಕುರಿತು ಘೋಷಣೆ ಮಾಡಿದ್ದು, ಅದರ ಅನ್ವಯ ಆದೇಶ ಹೊರಡಿಸಲಾಗಿದೆ. ನೌಕರರು ನಿವೃತ್ತಿ ಸಂದರ್ಭದಲ್ಲಿ ಪಡೆಯುವ ರಜೆ ನಗರೀಕರಣಕ್ಕೆ ತೆರಿಗೆ ವಿನಾಯಿತಿ ಪಡೆಯಲು 30 ಸಾವಿರ ರೂಪಾಯಿ ಮೂಲವೇತನ ಮತ್ತು 3 ಲಕ್ಷ ರೂಪಾಯಿಯ ಮಿತಿ ಹಾಕಲಾಗಿದ್ದು, ಇದನ್ನು 25 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.

 

 

 

error: Content is protected !!

Join the Group

Join WhatsApp Group