ಜಾತ್ರೆಯಲ್ಲಿ ಆಡುತ್ತಿದ್ದ ಬಾಲಕ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com. ದೊಡ್ಡಬಳ್ಳಾಪುರ, ಮೇ.25. ಮುತ್ಯಾಲಮ್ಮ ಜಾತ್ರೆಯಲ್ಲಿ ಏರ್​ ಬಲೂನ್​ ಜಂಪಿಂಗ್​​ ಆಟವಾಡುತ್ತಿದ್ದ ಬಾಲಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ನಡೆಯಿತು.  ಬಾಲಕನ ಸಾವಿನಿಂದಾಗಿ ಜಾತ್ರೆಯ ಆಯೋಜಕರ ಮೇಲೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿ ಮಂಜುನಾಥ್ ಎಂಬವರ ಪುತ್ರ 11 ವರ್ಷದ ಶ್ರೇಯಸ್​ ಮೃತ ಬಾಲಕ. ಮಂಜುನಾಥ್​ ಅವರು ಚಿಕ್ಕ ಕುರುಕಲು ಅಂಗಡಿ ನಡೆಸುತ್ತಿದ್ದಾರೆ. ಶ್ರೇಯಸ್​ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ರಾತ್ರಿ ತನ್ನ ತಾಯಿ ಜೊತೆಗೆ ಎರಡು ದಿನಗಳಿಂದ ಇಲ್ಲಿ ನಡೆಯುತ್ತಿರುವ ಜಾತ್ರೆಗೆ ಹೋಗಿದ್ದ.

ಜಾತ್ರೆಯಲ್ಲಿ ಮಕ್ಕಳ ಮನೋರಂಜನೆಗಾಗಿ ಹಾಕಲಾಗಿರುವ ವಿವಿಧ ಆಟಗಳಲ್ಲಿ ತೊಡಗಿದ್ದ. ಏರ್​ ಬಲೂನ್​ ಜಂಪಿಂಗ್​ ಮಾಡುತ್ತಿದ್ದಾಗ ಶ್ರೇಯಸ್​ಗೆ ಹೃದಯಾಘಾತವಾಗಿದೆ. ನಿತ್ರಾಣಗೊಂಡು ಅಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಬರಿಗೊಂಡ ತಾಯಿ ಮತ್ತು ಜನರು ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅದಾಗಲೇ ಪ್ರಾಣಪಕ್ಷಿ ಹಾರಿ ಹೋಗಿದ್ದನ್ನು ವೈದ್ಯರು ತಿಳಿಸಿದ್ದಾರೆ.

Also Read  ಉಡುಪಿ ಕೃಷ್ಣಮಠದಲ್ಲಿ ಕಾಣೆಯಾಗಿದ್ದ 'ಕನ್ನಡ ಬೋರ್ಡ್' ಪ್ರತ್ಯಕ್ಷ

ದೊಡ್ಡಬಳ್ಳಾಪುರ ನಗರ ದೇವತೆಯಾದ ಮುತ್ಯಾಲಮ್ಮ ದೇವಿ ಜಾತ್ರೆ ಪ್ರತಿ ವರ್ಷದಂತೆ ಕಳೆದ 2 ದಿನಗಳಿಂದ ಅದ್ಧೂರಿಯಾಗಿ ಜರುಗುತ್ತಿದೆ. ಜಾತ್ರೆಯಲ್ಲಿ ಮನೋರಂಜನೆಗಾಗಿ ಹಲವು ವಿಧದ ಆಟಗಳನ್ನು ಹಾಕಲಾಗಿದೆ. ಏರ್​ ಬಲೂನ್​ ಜಂಪಿಂಗ್​ ವೇಳೆ ಬಾಲಕ ಮೃತಪಟ್ಟಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top