(ನ್ಯೂಸ್ ಕಡಬ) newskadaba.com. ಮಂಗಳೂರು, ಮೇ.25. ದಕ್ಷಿಣ ಕನ್ನಡ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್‌ಗೆ ಸಿದ್ದವಾಗಿದ್ದ ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ನಡೆದಿದೆ. ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕಾಪ್ ವೇಳೆ ರನ್ ವೇನಲ್ಲಿಯೇ ಘಟನೆ ನಡೆಯಿತು ಎಂದು ತಿಳಿದುಬಂದಿದೆ.
ಬೆಳಗ್ಗೆ 8.15 ಕ್ಕೆ ಹೊರಟಿದ್ದ ವಿಮಾನವು ಟ್ಯಾಕ್ಸಿ ವೇ ದಾಟಿ ರನ್ವೇನಲ್ಲಿ ಸಾಗುತ್ತಿದ್ದಂತೆ ವಿಮಾನದ ರೆಕ್ಕೆಯ ಭಾಗಕ್ಕೆ ಹದ್ದು ಡಿಕ್ಕಿ ಹೊಡೆದಿದೆ. ಅಪಾಯದ ಸೂಚನೆ ಅರಿತ ಪೈಲೆಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಟೇಕಾಫ್ ರದ್ದು ಮಾಡಿ ರನ್ ವೇನಿಂದ ವಿಮಾನ ವಾಪಸ್ ಬಂದಿದೆ. ಪ್ರಯಾಣಿಕರನ್ನು ಇಳಿಸಿ ವಿಮಾನದ ತಪಾಸಣೆ ನಡೆಸಲಾಗಿದೆ.