ಚಿಕಿತ್ಸೆ ನೀಡಲು ನಿರಾಕರಿಸಿದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಅಮಾನತು.!

(ನ್ಯೂಸ್ ಕಡಬ)newskadaba.com ಹಾವೇರಿ,ಮೇ.24  ಪುಡ್ ಪಾಯಿಸನ್ ನಿಂದ ಆಸ್ಪತ್ರೆಗೆ ದಾಖಲಾದಂತ ಜನರಿಗೆ ಚಿಕಿತ್ಸೆ ನೀಡಲು ವಿಳಂಬ, ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೇ ನಿರ್ಲಕ್ಷ್ಯ ತೋರಿದಂತ ರಟ್ಟೀಹಳ್ಳಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಪುಡ್ ಪಾಯಿಸನ್ ನಿಂದ 40ಕ್ಕೂ ಹೆಚ್ಚು ಮಂದಿ ಜನರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡದೇ ವೈದ್ಯ ಡಾ.ಪುಷ್ಪಾ ನಿರ್ಲಕ್ಷ್ಯ ತೋರಿದ್ದರು. ಕರ್ತವ್ಯಕ್ಕೆ ತಡವಾಗಿ ಬಂದಿದ್ದಲ್ಲದೆ, ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡದ ಕಾರಣ ಅವರಿಗೆ ಜಿಲ್ಲಾಡಳಿತ ಅಮಾನತು ಶಿಕ್ಷೆಯನ್ನು ನೀಡಿ, ಶಾಕ್ ನೀಡಿದೆ.

Also Read  ಹಾಸನದಲ್ಲಿ ಮಹಿಳಾ PSI ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

 

error: Content is protected !!
Scroll to Top