(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.17. ಆಂಬುಲೆನ್ಸ್ ನಲ್ಲಿ ಇರಬೇಕಾದ ಸೌಲಭ್ಯಗಳು ಇಲ್ಲದಿರುವುದರಿಂದ ಹಾಗೂ ಅಪಘಾತ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದಲ್ಲಿ ಎಪ್ರಿಲ್ 01 ರಿಂದ ಓಮ್ನಿ ಆಂಬುಲೆನ್ಸ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾರಿಗೆ ಇಲಾಖೆಯು ಸಿದ್ಧತೆ ನಡೆಸಿದೆ.
ಓಮ್ನಿ ಆಂಬುಲೆನ್ಸ್ ಗಳನ್ನು ನಿರ್ಬಂಧಿಸುವಂತೆ ಆರೋಗ್ಯ ಇಲಾಖೆಯು ಕಳೆದ ವರ್ಷ ಸಾರಿಗೆ ಇಲಾಖೆಗೆ ಮನವಿ ಮಾಡಿತ್ತು. ಅದರಂತೆ ಸಾರಿಗೆ ಓಮ್ನಿ ಆಂಬುಲೆನ್ಸ್ ಗಳನ್ನು ನಿರ್ಬಂಧಿಸಿತ್ತು. ಏಕಾಏಕಿ ನಿಷೇಧಿಸಿದ್ದಕ್ಕೆ ತಡೆ ನೀಡಿದ್ದ ಹೈಕೋರ್ಟ್, 2018 ರ ಎಪ್ರಿಲ್ 01 ರ ಬಳಿಕ ನಿಷೇಧಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಪ್ರಿಲ್ 01ರ ಬಳಿಕ ಓಮ್ನಿ ಆಂಬುಲೆನ್ಸ್ ನಿಷೇಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಈ ಪ್ರಕಾರ, ಎಪ್ರಿಲ್ 01 ರ ನಂತರ ಓಮ್ನಿ ವಾಹನಗಳನ್ನು ಆಂಬುಲೆನ್ಸ್ ಗಳಾಗಿ ನೋಂದಣಿ ಮಾಡುವ ಹಾಗಿಲ್ಲ.