ಕಾನೂನು ಬದ್ಧವಾಗಿ ಇರಲಿದೆ 2000 ರೂ. ನೋಟು, ಧಾವಂತ ಬೇಡ ➤ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.22. ಎರಡು ಸಾವಿರ ರೂ. ಮುಖಬೆಲೆಯ ನೋಟುಗಳು ಸೆ.30ರ ನಂತರವೂ ಕಾನೂನುಬದ್ಧವಾಗಿ ಮುಂದುವರಿಯುವ ಕಾರಣ ಗ್ರಾಹಕರು ಅವಸರದಲ್ಲಿ ಬ್ಯಾಂಕ್ ಗಳಿಗೆ ಧಾವಿಸುವ ಅಗತ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು.


ಈ ಬಗ್ಗೆ ಮಾತನಾಡಿದ ಅವರು, 2 ಸಾವಿರದ ನೋಟುಗಳನ್ನು ಬ್ಯಾಂಕುಗಳಲ್ಲಿ ದಿನಕ್ಕೆ ವ್ಯಕ್ತಿಯೊಬ್ಬರಿಗೆ 20 ಸಾವಿರದಂತೆ ಬದಲಾವಣೆ ಮಾಡಿಕೊಳ್ಳಲು ಸೆ.30 ರವರೆಗೆ ಅವಕಾಶವಿದೆ. ಸೆ. 30ರ ನಂತರವೂ 2ಸಾವಿರ ಮುಖಬೆಲೆಯ ನೋಟುಗಳಿಗೆ ಮಾನ್ಯತೆ ಇರುತ್ತದೆ, ಆದರೆ ಅದಷ್ಟು ನೋಟುಗಳನ್ನು ವಾಪಾಸು ಪಡೆಯುವ ಉದ್ದೇಶದಿಂದ ಗಡುವು ನೀಡಲಾಗಿದೆ ಮತ್ತು ಪರಿಸ್ಥಿತಿಯನ್ನು ಗಮನಿಸಿಕೊಂಡು ಸೆಪ್ಟೆಂಬರ್ ತಿಂಗಳ ಗಡುವನ್ನು ಪರಿಶೀಲನೆ ಮಾಡಲಾಗುತ್ತದೆ ಎಂದರು.

Also Read  ಉಳ್ಳಾಲದಿಂದ ಹೊರಟ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಜನಾಝ - ಕೆಲವೇ ಕ್ಷಣಗಳಲ್ಲಿ ಕಡಬ ತಾಲೂಕಿನ ಕೂರತ್ ಗೆ ಆಗಮನ

error: Content is protected !!
Scroll to Top