ಯುವಕನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ

(ನ್ಯೂಸ್ ಕಡಬ)newskadaba.com ತುಮಕೂರು, ಮೇ.22. ಯುವಕನನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ತುಮಕೂರು ಹೊರವಲಯದಲ್ಲಿರುವ ಯಲ್ಲಾಪುರದ ಅಂಗಡಿಯೊಂದರಲ್ಲಿ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಮೂಲದ ಜಾಕೀರ್ ಇಸ್ಮಾಯಿಲ್ (36) ಎಂಬವರು ಕೊಲೆಯಾಗಿದ್ದಾರೆ.


ಜಾಕೀರ್ ಇಬ್ಬರು ಮಕ್ಕಳೊಂದಿಗೆ ಯಲ್ಲಾಪುರದ ಗಣೇಶ ದೇವಸ್ಥಾನದ ಬಳಿ ವಾಸವಿದ್ದರು.2 ತಿಂಗಳ ಹಿಂದೆ ನೂತನ ಟೈಲ್ಸ್‌ನ ಅಂಗಡಿಯನ್ನು ಯಲ್ಲಾಪುರದಲ್ಲಿ ತೆರೆದಿದ್ದನು. ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ.

Scroll to Top