ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಡಿವೈಎಸ್‌ಪಿ, ಎಸ್‌ಐ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು,ಮೇ.20 ಪುತ್ತೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಸದ ಡಿ.ವಿ. ಸದಾನಂದಗೌಡ ಅವರ ಚಿತ್ರವಿದ್ದ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಈ ಪ್ರಕರಣ ಸಂಬಂಧ ಪುತ್ತೂರು ನಗರಠಾಣೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ನರಿಮೊಗ್ರುವಿನ ಅವಿನಾಶ್ ನೀಡಿದ ದೂರಿನ ಮೇಲೆ ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ, ಪುತ್ತೂರು ಗ್ರಾಮಾಂತರ ಠಾಣೆ ಪಿಎಸ್‌ಐ ಶ್ರೀನಾಥ ರೆಡ್ಡಿ, ಕಾನ್‌ಸ್ಟೆಬಲ್ ಹರ್ಷಿತ್ ವಿರುದ್ಧ ಐಪಿಸಿ 323, 324, 506 ಕಲಂ ಅನ್ವಯ ಪ್ರಕರಣ ದಾಖಲಾಗಿದೆ.

Also Read  ಎರಡು ತಿಂಗಳ ಬಳಿಕ ನಾಗರಿಕ ಕಾಮಗಾರಿಗಳ ಪರಿಶೀಲನೆ ಕಾರ್ಯ ಪುನರ್ ಆರಂಭ

 

 

error: Content is protected !!
Scroll to Top