(ನ್ಯೂಸ್ ಕಡಬ)newskadaba.com ಉಡುಪಿ, ಮೇ.20. ಉಡುಪಿಯ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕೃಷ್ಣ ಮಠದಲ್ಲಿ ಒಂದೆಡೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದಲ್ಲಿ ಮತ್ತೊಂದೆಡೆ ಪ್ರವಾಸಿಗರು ದುರ್ವಾಸನೆಯಲ್ಲಿ ನಲುಗುತ್ತಿದ್ದಾರೆ.
ಶ್ರೀಕೃಷ್ಣ ಮಠದ, ಧಾರ್ಮಿಕ ಮತ್ತು ಇತರ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುವ ರಾಜಾಂಗಣ ಸಭಾಭವನದ, ಮೂಡಣ ಪ್ರವೇಶ ದ್ವಾರದ ಸನಿಹ ಕಸ ತ್ಯಾಜ್ಯಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಪರಿಣಾಮ ಪವಿತ್ರ ತೀರ್ಥ ಕ್ಷೇತ್ರದ ಅಂದಗೆಟ್ಟಿದ್ದಲ್ಲದೆ, ಇಲ್ಲಿ ರೋಗ ವಾಹಕ ಸೊಳ್ಳೆಗಳ ಉತ್ಪತ್ತಿಯಾಗುವ ಲಕ್ಷಣಗಳು ಕಂಡುಬಂದಿವೆ. “ಸುಂದರ ಉಡುಪಿ- ಶ್ರೀಕೃಷ್ಣನ ಉಡುಪಿ” ಎಂದು ಬಣ್ಣನೆಗೆ ಪಾತ್ರವಾಗಿರುವ ಉಡುಪಿಗೆ ಇದೊಂದು ಕಪ್ಪುಚುಕ್ಕೆಯಂತಾಗಿದೆ.