ಪೆಟ್ರೋಲ್ ಬಂಕ್​ನಲ್ಲಿ ಅಗ್ನಿ ದುರಂತ➤ಯವತಿ ಮೃತ್ಯು

(ನ್ಯೂಸ್ ಕಡಬ)newskadaba.com ತುಮಕೂರು,ಮೇ.20 ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಯುವತಿ ಸಾವನ್ನಪ್ಪಿದ್ದಾರೆ. ಶಿರಾ ತಾಲ್ಲೂಕಿನ ಜವನಹಳ್ಳಿ ಗ್ರಾಮದ ನಿವಾಸಿ ಭವ್ಯಾಗೌಡ ಮೃತ ಯುವತಿ. ಭವ್ಯಾ ಗೌಡ ತಮ್ಮ ಸ್ಕೂಟರ್​ಗೆ ಬಡವನಹಳ್ಳಿಯ ಬಂಕ್​ನಲ್ಲಿ ಪೆಟ್ರೋಲ್ ಹಾಕಿಸಲು ಬಂದಿದ್ದರು.

ಸ್ಕೂಟರ್ ಇಂಜಿನ್ ಬಿಸಿಯಾಗಿದ್ದರಿಂದ ಪೆಟ್ರೋಲ್ ಹಾಕಿಸುವ ವೇಳೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಹತ್ತಿಕೊಂಡ ಬೆಂಕಿ ಭವ್ಯಾಗೌಡರನ್ನು ಆವರಿಸಿಕೊಂಡಿದೆ. ಕೂಡಲೇ ಬಂಕ್ ಸಿಬ್ಬಂದಿ ಬೆಂಕಿ ನಂದಿಸಿ ಭವ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

 

 

 

Scroll to Top