ಚುನಾವಣೆಯ ಬಳಿಕ ಕೆ.ಎಸ್.ಮಸೂದ್ ರನ್ನು ಭೇಟಿಯಾದ ಶಾಸಕ ಯು.ಟಿ ಖಾದರ್

(ನ್ಯೂಸ್ ಕಡಬ)newskadaba.com ಮಂಗಳೂರು,ಮೇ.17 ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ವಿಪಕ್ಷ ಉಪನಾಯಕ, ಮಂಗಳೂರು ಶಾಸಕ ಯು.ಟಿ ಖಾದರ್ ಅವರು ಚುನಾವಣೆಯ ಬಳಿಕ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಲ್ ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅವರನ್ನು ಭೇಟಿಯಾದರು.

ವಿಜೇತ ಶಾಸಕ ಯು ಟಿ ಖಾದರ್ ರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕೆ ಎಸ್ ಮಸೂದ್ ಹರಸಿ ಹಾರೈಸಿದರು. ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶಾಸಕ ಯು ಟಿ ಖಾದರ್ ಸಹಿತ ಕಾಂಗ್ರೆಸ್ ಕಾರ್ಯಕರ್ತರು ಮಸೂದ್ ಅವರಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಗೌರವಿಸಿದರು.

Also Read  ದಾಖಲೆ ಬರೆದ ಮಿಥಾಲಿ ರಾಜ್ 200 ಏಕದಿನ ಪಂದ್ಯವಾಡಿದ► ವಿಶ್ವದ ಮೊದಲ ಆಟಗಾರ್ತಿ

 

 

error: Content is protected !!