ಈ ಬಾರಿ ಮುಂಗಾರು ಮಳೆ ಅಲ್ಪ ವಿಳಂಬ ಸಾಧ್ಯತೆ.!➤ ಹವಮಾನ ಇಲಾಖೆ ಸೂಚನೆ

(ನ್ಯೂಸ್ ಕಡಬ) newskadaba.com ವದೆಹಲಿ,ಮೇ.17 ಈ ಬಾರಿ ಮುಂಗಾರು ಮಳೆ ಅಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಜೂನ್ 1 ರ ವೇಳೆಗೆ ಆಗಮಿಸುವ ಮುಂಗಾರು ಈ ಬಾರಿ ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಹೇಳಿದೆ.ಸಾಮಾನ್ಯವಾಗಿ ಮುಂಗಾರು ಜೂನ್ 1ಕ್ಕೆ ಕೇರಳ ಪ್ರವೇಶಿಸುತ್ತದೆ.

ಇದರಲ್ಲಿ 7 ದಿನ ಮುಂದೂಡಿಕೆ ಅಥವಾ ಹಿಂದೂಡಿಕೆ ಸಾಧ್ಯತೆ ಇರುತ್ತದೆ. ಕಳೆದ ವರ್ಷ ಮೇ 29ಕ್ಕೆ ಮುಂಗಾರು ಪ್ರವೇಶಿಸಿತ್ತು. ಈ ಬಾರಿ ಜೂನ್ 4ರ ವೇಳೆಗೆ ಕೇರಳಕ್ಕೆ ಮುಂಗಾರು ಆಗಮನವಾಗಲಿದ್ದು, ನಂತರ ಕರ್ನಾಟಕ ಪ್ರವೇಶಿಸಲಿದೆ. ಈ ವರ್ಷ ವಾಡಿಕೆಯಂತೆ ಮಳೆಯಾಗಲಿದೆ ಎಂದು ಹೇಳಲಾಗಿದೆ.

Also Read  ಇಂಗ್ಲೀಷ್ ಮಾತನಾಡಲು ಬರಲಿಲ್ಲವೆಂದು ವಿದ್ಯಾರ್ಥಿಗೆ ಕೊಳಕು ಚಪ್ಪಲಿ ಹಾರ ಹಾಕಿ ಮೆರವಣಿಗೆ

 

 

 

error: Content is protected !!
Scroll to Top