ಮಂಗಳೂರು: 1.35 ಲಕ್ಷ ರೂ. ಬ್ರಾಸ್ ಲೆಟ್ ಕಸಿದು ಪರಾರಿ ➤ ಪರಿಚಿತರ ಕೃತ್ಯ, ದೂರು

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.16. ನಗರದ ಜಿಎಚ್‌ಎಸ್ ರಸ್ತೆಯ ಖಾಸಗಿ ಕ್ಲಿನಿಕ್‌ ನ ಬಳಿ ಸತೀಶ್ ರಾವ್ ಅವರ ಕೈಯಲ್ಲಿದ್ದ ಚಿನ್ನದ ಬ್ರಾಸ್ ಲೆಟ್ ಅನ್ನು ಪರಿಚಿತರೇ ಸುಲಿಗೆ ಮಾಡಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತೀಶ್ ತನ್ನ ಮಗ ರಿಶಬ್ ಸೂರ್ಯನ್ನು ಚಿಕಿತ್ಸೆಗಾಗಿ ಜಿಎಚ್‌ಎಸ್ ರಸ್ತೆಯಲ್ಲಿರುವ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಹೊರರೋಗಿ ವಿಭಾಗದಿಂದ ಮರಳುವಾಗ ಪರಿಚಿತ ಗೋವಿಂದ್ ರಾಜ್ ನಾಯಕ್ ಮತ್ತು ಅವರ ಮಗ ಗಿರೀಶ್ ನಾಯಕ್ ಅವರು ಸತೀಶ್ ಅವರ ಬಲಗೈಯಲ್ಲಿದ್ದ ಸುಮಾರು 22.50 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೈಟನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

 

Scroll to Top