ರಾಜ್ಯಾದ್ಯಂತ ಮತ ಎಣಿಕೆ ಕಾರ್ಯ ಆರಂಭ ➤ ಅಭ್ಯರ್ಥಿಗಳ ಎದೆಯಲ್ಲಿ ಢವಢವ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.13. ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ರಾಜ್ಯಾದ್ಯಂತ ಆರಂಭಗೊಂಡಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಆರಂಭವಾಗಿದೆ.

ರಾಜ್ಯದ ಚುಕ್ಕಾಣಿಯನ್ನು ಯಾವ ಪಕ್ಷ ಹಿಡಿಯುತ್ತದೆ ಎಂಬುವುದು ಮಧ್ಯಾಹ್ನದ ವೇಳೆಗೆ ಬಹುತೇಕ ಹೊರಬೀಳಲಿದ್ದು, ಘಟಾನುಘಟಿ ನಾಯಕರ ಅದೃಷ್ಟ ಹೊರಬರಲಿದೆ. ಮಂಗಳೂರಿನ ಮತ ಎಣಿಕೆ ಕೇಂದ್ರದ ಒಂದು ಕೀ ದೊರೆಯದ ಹಿನ್ನೆಲೆಯಲ್ಲಿ ಬೀಗವನ್ನು ಒಡೆದ ಬಗ್ಗೆ ವರದಿಯಾಗಿದೆ.

error: Content is protected !!