ಕಸ ತುಂಬುವ ವಾಹನದಲ್ಲಿ ಪತ್ರಕರ್ತನ ಮೃತದೇಹ ರವಾನೆ ► ವರದಿ ಕೇಳಿದ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.16. ಅಪಘಾತದಲ್ಲಿ ಮೃತಪಟ್ಟ ಖಾಸಗಿ ವಾಹಿನಿಯ ವರದಿಗಾರನ ಮೃತದೇಹವನ್ನು ಕಸ ತುಂಬುವ ವಾಹನದಲ್ಲಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಕೇಳಿದ್ದಾರೆ.

ಮೌನೇಶ ಪೋತರಾಜ್(28) ಎಂಬವರು ಶನಿವಾರ ರಾತ್ರಿ ಹಾನಗಲ್ ನ ಗಂಡೂರು ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಪೋತರಾಜ್ ಅವರ ಮೃತದೇಹವನ್ನು ಹಾನಗಲ್ ಪುರಸಭೆಯ ಕಸ ತುಂಬುವ ಟ್ರ್ಯಾಕ್ಟರ್ ನಲ್ಲಿ ರವಾನೆ ಮಾಡಲಾಗಿತ್ತು. ಈ ಸಂಬಂಧ ಉತ್ತರ ವಲಯದ ಐಜಿಪಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಕೇಳಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಘಟನೆಯ ಬಗ್ಗೆ ತಿಳಿದು ನೋವಾಗಿದೆ. ಉತ್ತರ ವಿಭಾಗದ ಎಡಿಜಿಪಿ ಹಾಗೂ ಸಂಚಾರಿ ವಿಭಾಗದ ಕಮಿಷನರ್ ಅವರಿಂದ ವರದಿ ಕೇಳಿದ್ದೇನೆ ಎಂದಿದ್ದಾರೆ.

Also Read  ಮಂಗಳೂರು ಡ್ರಗ್ಸ್‌ ಪ್ರಕರಣ ➤ ಮತ್ತಿಬ್ಬರನ್ನು ವಶಕ್ಕೆ ಪಡೆದ ಸಿಸಿಬಿ

error: Content is protected !!
Scroll to Top