ನಾಡಿನ ಖ್ಯಾತ ಅಕ್ಷರ ದಾಸೋಹಿ ಪುಟ್ಟಮ್ಮಜ್ಜಿ ನಿಧನ.!

(ನ್ಯೂಸ್ ಕಡಬ)Newskadaba.com ದಾವಣಗೆರೆ,ಮೇ.11 ನಾಡಿನ ಖ್ಯಾತ ಅಕ್ಷರ ದಾಸೋಹಿ ಪುಟ್ಟಮ್ಮಜ್ಜಿ (94) ವಿಧಿವಶರಾಗಿದ್ದಾರೆ.ಇವರು ರಾಣೇಬೆನ್ನೂರು ತಾಲೂಕಿನ, ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣ್ಣಕ್ಕೆ ಹೊಂದಿಕೊಂಡಿರುವ ಕುಮಾರಪಟ್ಟಣಂ ಗ್ರಾಮದವರಾಗಿದ್ದು ಹಾವೇರಿ ಜಿಲ್ಲೆಯ ಹಿರಿಮೆಗೆ ಗರಿಯಂತಿದ್ದರು. ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾದ ಹಿನ್ನಲೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು.

ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದನ್ನು ಗಮನಿಸಿದ ಪುಟ್ಟಮ್ಮಜ್ಜಿ 1988ರಲ್ಲಿ ಸ್ವಂತ ಶಾಲೆ ಆರಂಭಿಸಿದ್ದರು. ಪತಿ ಮತ್ತು ಕುಟುಂಬದವರ ವಿರೋಧದ ನಡುವೆ ಶಾಲೆ ಆರಂಭಿಸಿದ ಪುಟ್ಟಮ್ಮಜ್ಜಿ ಗ್ರಾಮದ ದೇವಸ್ಥಾನ ಮತ್ತು ಪಾಳುಬಿದ್ದ ಮನೆಗಳನ್ನು ಹುಡುಕಿ ಸ್ವತಃ ಸ್ವಚ್ಚಗೊಳಿಸಿ ಪಾಠ ಮಾಡುತ್ತಿದ್ದರು.

ಹಿಂದೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಪುಟ್ಟಮ್ಮ ಹಿರೇಮಠ, 1988 ರಲ್ಲಿ ನಿವೃತ್ತಿ, ಪಿಂಚಣಿ ಹಣದಲ್ಲೇ ಸ್ವಂತ ಶಾಲೆ ತೆರೆದು, ಶಿಕ್ಷಕರಿಗೆ ಸಂಬಳ, ಬಾಡಿಗೆ ನೀಡುತ್ತಿದ್ದರು. ಕರ್ನಾಟಕದ ಸಾವಿತ್ರಿ ಬಾಯಿ ಫುಲೆ ಎಂದೇ ಪ್ರಸಿದ್ಧರಾಗಿದ್ದ ಇವರು ತಿವ್ರ ಅನಾರೋಗ್ಯ ಹಿನ್ನೆಲೆ ಹಾಸಿಗೆ ಹಿಡಿದಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟಮ್ಮಜ್ಜಿ ವಿಧಿವಶರಾಗಿದ್ದಾರೆ.

 

 

 

 

 

error: Content is protected !!

Join the Group

Join WhatsApp Group