ಬಾವಿಗೆ ಬಿದ್ದು ಮೂರು ವರ್ಷದ ಮಗು ಮೃತ್ಯು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.11 ಬಾವಿಗೆ ಬಿದ್ದು ಮೂರು ವರ್ಷದ ಮಗು ದುರಂತ ಸಾವಿಗೀಡಾಗಿರುವ ಘಟನೆ ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ.ರೋಶನ್ ಎಂಬುವರ ಪುತ್ರಿ ಸಿಯಾನ್ (3) ಮೃತಪಟ್ಟ ಮಗು.

ಬಲೂನ್ ಜತೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಗು ತೆರೆದ ಬಾವಿಗೆ ಬಿದ್ದು ದುರ್ಘಟನೆ ಸಂಭವಿಸಿದೆ.ಬಲೂನ್ ಬಾವಿಯಲ್ಲಿ ಬಿದ್ದಾಗ ಅದನ್ನು ತೆಗೆಯಲು ಮಗು ಮುಂದಾಯಿತು. ಬಾವಿಯ ಬಳಿ ಬಂದು ಬಲೂನ್​ ಅನ್ನು ನೋಡುವ ಸಂದರ್ಭದಲ್ಲಿ ಮಗು ಬಾವಿಗೆ ಬಿದ್ದಿದೆ.

ಈ ವೇಳೆ ಪಾಲಕರು ಒಳಗಿದ್ದರಿಂದ ಮಗು ಬಾವಿಗೆ ಬಿದ್ದಿರುವುದು ಅವರಿಗೆ ಗೊತ್ತಾಗಲಿಲ್ಲ, ಹೀಗಾಗಿ ಮಗು ಮೃತಪಟ್ಟಿದೆ. ಮಕ್ಕಳನ್ನು ಮನೆಯಿಂದ ಹೊರಗೆ ಆಟವಾಡಲು ಬಿಟ್ಟು ಅವರ ಬಗ್ಗೆ ಗಮನವಹಿಸದೇ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗುವ ಪಾಲಕರಿಗೆ ಇದೊಂದು ರೀತಿಯಲ್ಲಿ ಎಚ್ಚರಿಕೆ ಗಂಟೆಯಾಗಿದೆ.

Also Read  ಅಕ್ರಮ ಗೋ ಸಾಗಾಟ ➤ ಆರೋಪಿ ಸಹಿತ ವಾಹನ ಪೊಲೀಸ್‌ ವಶಕ್ಕೆ

 

 

 

 

error: Content is protected !!