ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿಲ್ಲ➤ಅಧಿಕಾರಿಗಳ ವಿರುದ್ಧ ಮತದಾರರ ಆಕ್ರೋಶ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.11 ದೊಡ್ಡ ನಾಗಮಂಗಲದ ಮತ ಕೇಂದ್ರದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.ಎಲ್ಲರೂ ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸುವ ಅಧಿಕಾರಿಗಳು, ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿಲ್ಲ, ಕಾಯಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದಾರೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ‘ದೊಡ್ಡ ನಾಗಮಂಗಲದಲ್ಲಿ 6,160 ಮತದಾರರಿದ್ದು, ಅವರಿಗಾಗಿ ಒಂದು ಸಹಾಯಕ ಮತಗಟ್ಟೆ ಸೇರಿ ನಾಲ್ಕು ಮತಗಟ್ಟೆಗಳನ್ನು ರಚಿಸಲಾಗಿತ್ತು. ಒಂದು ಮತಗಟ್ಟೆಯಲ್ಲಿ ಮಾತ್ರ ಮತದಾರರ ಸಂಖ್ಯೆ 2,121 ಇತ್ತು. ಒಂದೇ ಪ್ರವೇಶದ್ವಾರ ಇದ್ದುದರಿಂದ ಸ್ವಲ್ಪ ಗೊಂದಲ ಉಂಟಾಗಿದೆ’ ಎಂದು ತಿಳಿಸಿದೆ.

Also Read  ಮನೋಕಾಮನೆಗಳನ್ನು ವಶಪಡಿಸಿಕೊಳ್ಳುವ ತಂತ್ರ

 

 

error: Content is protected !!
Scroll to Top