ಕಾರ್ಕಳ: ಅಪ್ರಾಪ್ತ ಬಾಲಕನಿಂದ ನಕಲಿ ಮತದಾನ

(ನ್ಯೂಸ್ ಕಡಬ)newskadaba.com ಕಾರ್ಕಳ, ಮೇ.11. ಅಪ್ರಾಪ್ತ ಬಾಲಕನೋರ್ವ ನಕಲಿ ಮತದಾನ ಮಾಡಿದ ಆರೋಪ ಕಾರ್ಕಳದಿಂದ ಕೇಳಿ ಬಂದಿದೆ. ತಾಲೂಕಿನ ಮಿಯ್ಯಾರು ಕುಂಟಿಬೈಲ್ ಮತಗಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೋಲೀಸರ ನಡುವೆ ವಾಗ್ವಾದ ನಡೆದು ಲಾಠಿ ಬೀಸಿದ ಘಟನೆ ಕಾರ್ಕಳಟ್ಟೆ ರಾತ್ರಿ ನಡೆದಿದೆ.


ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿ ಸಂಚರಿಸಬೆಕಾಗಿದ್ದ ಬಸ್ ನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪೋಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.ಇನ್ನು ಕಾರ್ಕಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 81.30% ಮತದಾನವಾಗಿದೆ.

error: Content is protected !!
Scroll to Top