(ನ್ಯೂಸ್ ಕಡಬ)newskadaba.com ಚಾಮರಾಜನಗರ, ಮೇ.11. ಮತದಾನಕ್ಕಾಗಿ ಆಗಮಿಸುತ್ತಿದ್ದಂತ ವೇಳೆ ಆನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತೋಕೆರೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಪುಟ್ಟಸ್ವಾಮಿ(35) ಎಂಬುದಾಗಿ ಗುರುತಿಸಲಾಗಿದೆ. ಪುಟ್ಟಸ್ವಾಮಿ ಮತದಾನಕ್ಕಾಗಿ ಮಹದೇಶ್ವರ ಬೆಟ್ಟದಲ್ಲಿರುವಂತ ಹಳೇ ಮಾರ್ಟನಳ್ಳಿಯಿಂದ ತೋಕೆರೆಗೆ ಕಾಲು ದಾರಿಯ ಮೂಲಕ ಬರುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ದಿಢೀರ್ ಆನೆ ದಾಳಿ ನಡೆಸಿ, ತುಳಿದು ಹಾಕಿದ್ದರಿಂದ ಪುಟ್ಟಸ್ವಾಮಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ