ಪಾಕ್‌ ಜೈಲಿನಲ್ಲಿದ್ದ 199 ಮಂದಿ ಭಾರತೀಯರು ರಿಲೀಸ್

(ನ್ಯೂಸ್ ಕಡಬ)newskadaba.com ಇಸ್ಲಾಮಾಬಾದ್, ಮೇ.09. ಪಾಕಿಸ್ತಾನದ ಜಲಗಡಿಯೊಳಗೆ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿ ಪಾಕ್‌ ಜೈಲಿನಲ್ಲಿದ್ದ 199 ಮಂದಿ ಭಾರತೀಯರನ್ನು ಮೇ 12ರ ಪಾಕ್‌ ಅಧಿಕಾರಿಗಳು ಬಿಡುಗಡೆ ಮಾಡಲಿದ್ದಾರೆ.

ಸಿಂಧ್‌ನ ಜೈಲು ವಿಭಾಗದ ಪೊಲೀಸ್‌ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಭಾರತೀಯ ಮೀನುಗಾರರನ್ನು ಲಾಹೋರ್‌ಗೆ ಕಳುಹಿಸಿ, ಅಲ್ಲಿಂದ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ. ಸದ್ಯಕ್ಕೆ ಈ ಮೀನುಗಾರರು ಲಾಂಧಿ ಜೈಲಿನಲ್ಲಿ ಇರಿಸಲಾಗಿದೆ.

654 ಭಾರತೀಯ ಮೀನುಗಾರರು ಕರಾಚಿ ಜೈಲುಗಳಲ್ಲಿ ಇದ್ದಾರೆ. ಅಂದಾಜು 83 ಪಾಕಿಸ್ತಾನಿ ಮೀನುಗಾರರು ಭಾರತೀಯ ಜೈಲುಗಳಲ್ಲಿದ್ದಾರೆ. 654 ಭಾರತೀಯ ಮೀನುಗಾರರ ಪೈಕಿ 631 ಮಂದಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.

Also Read  ಅಂಗಡಿ ಮತ್ತು ಮನೆಗಳಲ್ಲಿ ಧನಲಕ್ಷ್ಮೀ ನೆಲಸಬೇಕು ಅಂದ್ರೆ ಈ ನಿಯಮ ಪಾಲಿಸಿ

 

 

error: Content is protected !!
Scroll to Top