ಫೋನ್ ಬಿಟ್ಟಿರಲು ಆಗಲ್ವಾ? ಹಾಗಾದ್ರೆ ನಿಮಗೂ ನೋಮೋಫೋಬಿಯಾ ಇರಬಹುದು!

(ನ್ಯೂಸ್ ಕಡಬ) newskadaba.com ನವದೆಹಲಿ,  ಮೇ 05. ಭಾರತದಲ್ಲಿ ಪ್ರತಿ ನಾಲ್ಕು ಜನರ ಪೈಕಿ ಇಬ್ಬರು ನೋಮೋಫೋಬಿಯಾ ಹೊಂದಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ತಮ್ಮ ಸ್ಮಾರ್ಟ್‌ಫೋನ್‌ನಿಂದ ಬೇರ್ಪಡುವ ಭಯ ಹೊಂದಿರುವುದು ನೋಮೋಫೋಬಿಯಾ ಆಗಿದೆ. ಭಾರತದಲ್ಲಿ ಶೇಕಡಾ 72 ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೊಬೈಲ್ ಬ್ಯಾಟರಿ ಶೇಕಡಾ 20 ಅಥವಾ ಅದಕ್ಕಿಂತ ಕಡಿಮೆ ಆದಲ್ಲಿ ಆತಂಕಕ್ಕೆ ಒಳಗಾಗುತ್ತಾರೆ.

ಹಾಗೆಯೇ ಶೇಕಡಾ 65 ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಬ್ಯಾಟರಿ ಕಡಿಮೆಯಾಗುತ್ತಿದ್ದಂತೆ ಭಾವನಾತ್ಮಕ ಅಸ್ವಸ್ಥತೆ ಅನುಭವಿಸುತ್ತಾರೆ ಎಂದು ವರದಿ ತಿಳಿಸಿದೆ. ಕಡಿಮೆ ಬ್ಯಾಟರಿ ಉದ್ವಿಗ್ನತೆಯ ಗ್ರಾಹಕ ಅಧ್ಯಯನ’ ಎಂಬ ಶೀರ್ಷಿಕೆಯ ವರದಿಯು, ಮೊಬೈಲ್​ನ ಬ್ಯಾಟರಿ ಕಡಿಮೆಯಾದಂತೆ ಜನರಲ್ಲಿ ಈ ಫೋಬಿಯಾ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗ್ರಾಹಕರ ಮನಸ್ಥಿತಿ ಅಧ್ಯಯನ ಮಾಡಿದೆ.

Also Read  ರಥಸಪ್ತಮಿಯ ದಿನ ಈ ಒಂದು ವಸ್ತುವನ್ನು ಧಾನವಾಗಿ ನೀಡಿದರೆ ಎಲ್ಲ ರೀತಿಯ ಸಂಕಷ್ಟಗಳು ನಿವಾರಣೆಯಾಗುತ್ತವೆ

ವರದಿಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 42 ರಷ್ಟು ಜನ ಮನರಂಜನೆಗಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಇದರಲ್ಲಿ ಸಾಮಾಜಿಕ ಮಾಧ್ಯಮವು ಅಗ್ರಸ್ಥಾನದಲ್ಲಿದೆ. ಇನ್ನು ಶೇಕಡಾ 65 ರಷ್ಟು ಬಳಕೆದಾರರು ಬ್ಯಾಟರಿಯನ್ನು ಉಳಿಸಲು ಫೋನ್ ಬಳಕೆಯನ್ನು ಕಡಿಮೆ ಮಾಡುತ್ತಾರೆ ಮತ್ತು ಶೇಕಡಾ 82 ರಷ್ಟು ಜನ ತಮ್ಮ ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸುತ್ತಾರೆ.

ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಮಾತನಾಡಿ, ಸ್ಮಾರ್ಟ್‌ಫೋನ್‌ಗಳು ನಮ್ಮ ವೈಯಕ್ತಿಕ ವಿಶ್ವಗಳಾಗಿ ಮಾರ್ಪಟ್ಟಿವೆ, ಅದು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸಂಪರ್ಕದಲ್ಲಿರಲು ಮತ್ತು ಮನರಂಜನೆಗಾಗಿಯೂ ನಮಗೆ ಅವಕಾಶ ಮಾಡಿಕೊಡುತ್ತದೆ. ಪರಿಣಾಮವಾಗಿ, ನಮ್ಮಲ್ಲಿ ಅನೇಕರು ಫೋನ್ ಇಲ್ಲದೆ ಇದ್ದರೆ ಮುಂದೇನು ಎಂಬ ಫೋಬಿಯಾವನ್ನು ಬೆಳೆಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ಜನರು ಬ್ಯಾಟರಿ ಖಾಲಿಯಾಗುವ ಮತ್ತು ತಮ್ಮ ಫೋನ್‌ಗಳನ್ನು ಇನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂಬ ಆಲೋಚನೆಯಿಂದ ಆಗಾಗ್ಗೆ ಆತಂಕಕ್ಕೊಳಗಾಗುತ್ತಾರೆ ಎಂದು ತಿಳಿಸಿದರು.

Also Read  ➤ ಹಲಸಿನ ಹಣ್ಣು ತಿನ್ನುವುದರಿಂದ ಈ ನಾಲ್ಕು ಕಾಯಿಲೆಗಳನ್ನು ಶಾಶ್ವತವಾಗಿ ದೂರ ಮಾಡಬಹುದು

ಸ್ಮಾರ್ಟ್‌ಫೋನ್ ಚಟವನ್ನು ಕೆಲವೊಮ್ಮೆ ಆಡುಮಾತಿನಲ್ಲಿ ನೋಮೋಫೋಬಿಯಾ (ಮೊಬೈಲ್ ಫೋನ್ ಇಲ್ಲದಿರುವ ಭಯ) ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಇಂಟರ್ನೆಟ್ ವ್ಯಸನದ ಅಸ್ವಸ್ಥತೆಯಿಂದ ಉಂಟಾಗುತ್ತದೆ. ಆದರೆ ಇದು ವಾಸ್ತವದಲ್ಲಿ ಫೋನ್​ನಿಂದ ಆಗಿರುವುದಿಲ್ಲ. ಅದರಲ್ಲಿರುವ ಆಯಪ್​ಗಳು, ಗೇಮ್​ಗಳು ಮುಂತಾದುವುಗಳಿಂದ ಈ ಚಟ ಉಂಟಾಗುತ್ತದೆ.

error: Content is protected !!
Scroll to Top