ಮದ್ಯದ ಅಮಲಿನಲ್ಲಿ ಅನುಚಿತವಾಗಿ ವರ್ತಿಸಿದ ಪೊಲೀಸ್ ಪೇದೆ..! ➤ಕಣ್ಣೀರು ಹಾಕಿದ ಕುಸ್ತಿಪಟುಗಳು

(ನ್ಯೂಸ್ ಕಡಬ)Newskadaba.com ದೆಹಲಿ,ಮೇ.04 ತಡರಾತ್ರಿ ಜಂತರ್ ಮಂತರ್ ನಲ್ಲಿ ದೆಹಲಿ ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕುಡಿದ ಮತ್ತಿನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸ್ ಪೇದೆಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕುಸ್ತಿಪಟುಗಳು ಕಣ್ಣೀರಿಟ್ಟರು.


ಈ ವಿಷಯದ ಬಗ್ಗೆ ವಿನೇಶ್ ಫೋಗಟ್ ಕಣ್ಣೀರಾಕಿದ್ದಾರೆ. ದೆಹಲಿ ಪೊಲೀಸರು ನಮ್ಮೊಂದಿಗೆ ನಡೆದುಕೊಂಡ ರೀತಿ ದುಃಖಕರವಾಗಿದೆ. ನಾವು ಅಪರಾಧಿಗಳಲ್ಲ, ಇಂತಹ ದಿನಗಳನ್ನು ನೋಡೋದಕ್ಕಾ ನಾವು ಪದಕಗಳನ್ನು ಗೆದ್ದಿದ್ದು ಎಂದು ಕಣ್ಣೀರು ಹಾಕಿದರು. ಕುಡಿತದ ಅಮಲಿನಲ್ಲಿ ಪೊಲೀಸರು ಮಹಿಳೆಯರೆಂಬುದನ್ನೂ ನೋಡದೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Also Read  ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ

 

 

error: Content is protected !!
Scroll to Top