(ನ್ಯೂಸ್ ಕಡಬ)Newskadaba.com ಛತ್ತೀಸ್ ಗಢ,ಮೇ.02 ಎರಡು ವರ್ಷಗಳ ಅವಧಿಯಲ್ಲಿ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಐವರು ಶಿಕ್ಷಕರು ಮೃತಪಟ್ಟಿದ್ದು ಇದೀಗ ಶಾಲೆಯನ್ನೇ ಮುಚ್ಚಿರುವ ಘಟನೆ ಛತ್ತೀಸ್ಗಢದ ಮಾನೇಂದ್ರಗಢ ಚಿರ್ಮಿರಿ ಭರತಪುರ ಜಿಲ್ಲೆಯಲ್ಲಿ ನಡೆದಿದೆ. ಖಡ್ಗವಾನ್ ಬ್ಲಾಕ್‌ನ ಸಾವ್ಲಾ ಗ್ರಾಮ ಪಂಚಾಯಿತಿಯ ಬಸೆಲ್‌ಪುರದ ಸಾವಳ ಗ್ರಾಮದ ಸರ್ಕಾರಿ ಪೂರ್ವ ಮಾಧ್ಯಮಿಕ ಶಾಲೆಯಲ್ಲಿ ಈ ಬೆಳಣಿಗೆ ವರದಿಯಾಗಿದೆ.
ಎರಡು ವರ್ಷಗಳ ಅಂತರದಲ್ಲಿ ಈ ಶಾಲೆಯಲ್ಲಿದ್ದ 5 ಶಿಕ್ಷಕರು ಮೃತಪಟ್ಟಿದ್ದಾರೆ.ಎರಡು ವರ್ಷಗಳ ಅಂತರದಲ್ಲಿ ನಡೆದ ಈ ಶಿಕ್ಷಕರ ಸರಣಿ ಮೃತ್ಯುವಿನ ಕುರಿತ ಮೂಢನಂಬಿಕೆಯ ಭೀತಿಯಿಂದ ಶಾಲೆಗೆ ಬೀಗ ಜಡಿಯಲಾಗಿದೆ.ಇಲ್ಲಿ ಕೆಲಸ ಮಾಡುತ್ತಿದ್ದ ಉಳಿದ ಓರ್ವ ಶಾಲಾ ಸಿಬ್ಬಂದಿ ರಜೆ ಮೇಲೆ ತೆರಳಿದ್ದಾರೆ.
ಬಸೆಲ್‌ಪುರ ಗ್ರಾಮದ ಮೊದಲು ಜನರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಐವರುಮೃತಪಟ್ಟಿದ್ದಾರೆ.ಈ ಸಾವುಗಳಿಂದ ಶಾಲೆಗೆ ಬರುವ ಮಕ್ಕಳ ಮನದಲ್ಲಿ ಭಯ ಆವರಿಸಿದೆ.