ಮೂರು NIA ಕೋರ್ಟ್‌ ಸ್ಥಾಪಿಸಲು ಹೈಕೋರ್ಟ್‌ ಸೂಚನೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.29. ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣಗಳ ಶೀಘ್ರ ವಿಚಾರಣೆ ಮತ್ತು ವಿಲೇವಾರಿಗೆ ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ 6 ತಿಂಗಳೊಳಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಶಿಫಾರಸು ಮಾಡಿದೆ.

ಹುಬ್ಬಳ್ಳಿ ಪೊಲೀಸ್‌ ಠಾಣೆ ಮುಂದೆ ನಡೆದ ಗಲಭೆ ಕೇಸ್‌ನ ತೀರ್ಪು ನೀಡುವ ವೇಳೆ ಈ ಶಿಫಾರಸು ಮಾಡಿದೆ. ಒಂದುವೇಳೆ ಈ ವಿಶೇಷ ಕೋರ್ಟ್‌ ಸ್ಥಾಪನೆಯಾಗದಿದ್ದರೆ ರಾಜ್ಯದ ಏಕೈಕ ನ್ಯಾಯಾಲಯದ ಮೇಲೆ ಒತ್ತಡ ಹೆಚ್ಚಲಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣಗಳ ವಿಲೇವಾರಿ ವಿಳಂಬವಾಗಲಿದೆ ಎಂದು ಕೋರ್ಟ್‌ ತಿಳಿಸಿದೆ.

Also Read  ರಾಜ್ಯದಲ್ಲಿ ಮೋದಿ ಸುನಾಮಿ ಸೃಷ್ಟಿಯಾಗಿದೆ ➤ ಸಿಎಂ ಬೊಮ್ಮಾಯಿ..!       

 

error: Content is protected !!
Scroll to Top