ಉಡುಪಿ: ಬೈಕ್ ಗಳ ನಡುವೆ ಅಪಘಾತ ➤ ಮೂವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com ಉಡುಪಿ, ಏ.29. ಉಡುಪಿ ಮುಖ್ಯ ರಸ್ತೆಯ ಬೈಲೂರು ಕೆಳ ಪೇಟೆಯಲ್ಲಿ ಎರಡು ಬೈಕ್’ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, ಮೂರು ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.


ಯರ್ಲಪ್ಪಡಿ ಕಾಂತರಗೋಳಿ ನಿವಾಸಿ ರಮೇಶ ಆಚಾರ್ಯ ಮೃತಪಟ್ಟ ದುರ್ದೇವಿಯಾಗಿದ್ದಾರೆ. ರಮೇಶ ಆಚಾರ್ಯ ಪತ್ನಿ ಶಕುಂತಲಾ ಆಚಾರ್ಯ ಹಾಗೂ ಜಾರ್ಕಳ ನಿವಾಸಿಗಳಾದ ಸುಧೀರ್ ಹಾಗೂ ಡೇವಿಡ್ ಗಂಭೀರ ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಮೇಶ ಆಚಾರ್ಯ ದಂಪತಿಗಳು ಬೈಕ್ ನಲ್ಲಿ ರಸ್ತೆ ದಾಟುತ್ತಿದ್ದಾಗ ಉಡುಪಿಯಿಂದ ಜಾರ್ಕಳಕ್ಕೆ ಬರುತ್ತಿದ್ದ ಬೈಕು ಡಿಕ್ಕಿಯಾಗಿ ನಾಲ್ಕು ಮಂದಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದೆ ರಮೇಶ ಆಚಾರ್ಯ ಆಸ್ಪತ್ರೆಗೆ ಸಾಗಿಸಿದ್ದ ವೇಳೆ ನಿಧನರಾಗಿದ್ದಾರೆ ಎನ್ನಲಾಗಿದೆ.

Also Read  ನೂಜಿಬಾಳ್ತಿಲ ಗ್ರಾ.ಪಂ. ಆಡಳಿತಾಧಿಕಾರಿ ಭರತ್ ಬಿ.ಎಂ. ಅಧಿಕಾರ ಸ್ವೀಕಾರ

error: Content is protected !!