(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.28 ಕರ್ನಾಟಕ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಮೇ 10ರಂದು ನಡೆಯುವ ಚುನಾವಣೆಗೆ ವಿವಿಧ ಪಕ್ಷಗಳ ಪ್ರಚಾರ ಬಿಸಿಲಿನ ಕಾವಿಗಿಂತ ಹೆಚ್ಚಾಗಿದೆ. ಸಿನಿಮಾ ತಾರೆಯರು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಕಣಕ್ಕೆ ಧುಮುಕಿದ್ದಾರೆ.
ನೆಚ್ಚಿನ ನಟ-ನಟಿಯರನ್ನು ನೋಡಲು ಜನಸಾಗರ ಸೇರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬೆಂಬಲ ನೀಡಿದ ಅವರು ಪ್ರೀತಿಯ ಮಾಮನ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅವರು ರಾಜ್ಯದ ವಿವಿಧ ಕಡೆ ಪ್ರಚಾರ ಮಾಡುತ್ತಿದ್ದಾರೆ.
ಮುನಿರತ್ನ, ಎಚ್. ಡಿ. ಕುಮಾರಸ್ವಾಮಿ, ಉಪೇಂದ್ರ, ತಾರಾ, ನಿಖಿಲ್ ಕುಮಾರಸ್ವಾಮಿ, ಬಿ. ಸಿ. ಪಾಟೀಲ್, ಸುಮಲತಾ, ರಮ್ಯಾ, ಶೃತಿ, ಸಿ. ಪಿ. ಯೋಗೇಶ್ವರ್, ಜಗ್ಗೆಶ್, ಉಮಾಶ್ರೀ ಹೀಗೆ ಚಿತ್ರರಂಗದ ನಂಟು ಹೊಂದಿರುವ ಅನೇಕರು ಕರ್ನಾಟಕದ ರಾಜಕೀಯದಲ್ಲಿ ವಿವಿಧ ಪಕ್ಷಗಳಲ್ಲಿ ಸಕ್ರಿಯರಾಗಿದ್ದಾರೆ. ಹಲವು ನಟ-ನಟಿಯರು ವಿವಿಧ ಪಕ್ಷಗಳಿಗೆ ಸೇರ್ಪಡೆಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.