(ನ್ಯೂಸ್ ಕಡಬ) newskadaba.com.ಬೆಂಗಳೂರು, ಏ.28. ಬೇಸಿಗೆ ಕಾಲ ಬಂತಂದ್ರೆ ಮಾವಿನ ಸೀಸನ್ ಶುರುವಾಯ್ತು ಎಂದೇ ಅರ್ಥ. ಭಾರತದ ರಾಷ್ಟ್ರೀಯ ಹಣ್ಣು ಮಾವು. ಇದನ್ನು ಹಣ್ಣುಗಳ ರಾಜ ಎಂದೇ ಕರೆಯಲಾಗುತ್ತದೆ. ಅದರಲ್ಲಿಯೂ ಮಾವಿನ ಹಣ್ಣಿನ ರುಚಿಗೆ ಮನಸೋತವರೇ ಇಲ್ಲ. ಮಾವಿನ ಹಣ್ಣನ್ನು ನೆನೆಪಿಸಿಕೊಂಡರೆ ಸಾಕು ಎಂತವರಿಗೆ ಆದರೂ ಬಾಯಲ್ಲಿ ನೀರು ಬರುತ್ತದೆ.
ಭಾರತದಲ್ಲಿ ಮ್ಯಾಂಗೋ ಮಿಲ್ಕ್ ಶೇಕ್, ಮ್ಯಾಂಗೋ ಲಸ್ಸಿ ಹೀಗೆ ಅನೇಕ ಜನಪ್ರಿಯ ಖಾದ್ಯಗಳಿದೆ. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನ ವಿಧವಿಧವಾದ ಭಕ್ಷ್ಯಗಳನ್ನು ಸವಿದು ಜನ ಆನಂದಿಸುತ್ತಾರೆ. ಸದ್ಯ ನಾವಿಂದು ಮಾವಿನ ಹಣ್ಣಿನಲ್ಲಿ ಮಾಡಬಹುದಾದ ಕೆಲ ರೆಸಿಪಿಗಳನ್ನು ಹೇಳಿಕೊಂಡುತ್ತೇವೆ.
ಮಾವಿನಕಾಯಿ ತಿರಮಿಸು: ಇದು ಒಂದು ರೀತಿಯ ಸಿಹಿ ತಿಂಡಿಯಾಗಿದ್ದು, ಇದನ್ನು ಮಾಡುವುದೇ ಸಂತೋಷದ ವಿಚಾರ. ಮಸ್ಕಾರ್ಪೋನ್ ಚೀಸ್ ಮತ್ತು ಪುಡಿಮಾಡಿದ ಸಕ್ಕರೆಯನ್ನು ಮಿಶ್ರಣ ಮಾಡಿ ಕೆನೆಯಂತೆ ಆಗುವವರೆಗೂ ಬಿಸಿ ಮಾಡಿ. ನಂತರ ಹಾಲಿನ ಮಸ್ಕಾರ್ಪೋನ್ ಮತ್ತು ಲೇಯರ್ನಂತೆ ಮಾವಿನ ಹಣ್ಣನ್ನು ಕತ್ತರಿಸಿ ಮಿಶ್ರಣ ಮಾಡಿದರೆ, ಎಗ್ ಲೆಸ್ ಮ್ಯಾಂಗೋ ತಿರಮಿಸು ಸ್ವೀಟ್ಅನ್ನು ನೀವು ಸವಿಯಬಹುದು.