ಜಾತ್ರೆಯಲ್ಲಿ ವಾಹನಗಳ ಗ್ಲಾಸ್ ಒಡೆದು ಹಾನಿ ಮಾಡಿದ ಕಿಡಿಗೇಡಿಗಳು   ➤ ಮಕ್ಕಳು ಮಹಿಳೆಯರ ಮೇಲೂ ಲಾಠಿ ಬೀಸಿದ ಪೊಲೀಸರು.!  

(ನ್ಯೂಸ್ ಕಡಬ)Newskadaba.com ದಾವಣಗೆರೆ,ಏ.27 ಮಕ್ಕಳು ಮಹಿಳೆಯರು ಎಂಬುದನ್ನೂ ನೋಡದೆ ಪೊಲೀಸರು ಸಾರ್ವಜನಿಕರ ಮೇಲೆ ಲಾಠಿ ಬೀಸಿ ದೌರ್ಜನ್ಯ ತೋರಿದ್ದಾರೆ ಎನ್ನಲಾದ ಪ್ರಕರಣವೊಂದು ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣೆ ಬಳಿಯೇ ಈ ಘಟನೆ ನಡೆದಿದೆ.

ಜಗಳೂರಿನಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ದೊಡ್ಡ ಮಾರಮ್ಮನ‌ ಜಾತ್ರೆಯಲ್ಲಿ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ರಾತ್ರಿ ಜಾತ್ರೆ ಸಂದರ್ಭ ಕೆಲವು ಕಿಡಿಗೇಡಿಗಳು ವಾಹನಗಳ ಗ್ಲಾಸ್ ಒಡೆದು ಹಾನಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹತ್ತಕ್ಕೂ ಹೆಚ್ಚು ಯುವಕರನ್ನು ಠಾಣೆಗೆ ಕರೆದುಕೊಂಡು ಬಂದಿದ್ದರು.

Also Read  ಉಪ್ಪಿನಂಗಡಿ: ಅಂಗನವಾಡಿ ಕೇಂದ್ರದ ಬಳಿ ಅಪಾಯಕಾರಿ ವಿದ್ಯುತ್ ತಂತಿ ಸಂಪರ್ಕ ➤ ಎಸ್.ಡಿ.ಪಿ.ಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಮೆಸ್ಕಾಂ ಮನವಿ

ಅನಗತ್ಯವಾಗಿ ತಮ್ಮ ಮಕ್ಕಳನ್ನ ಕರೆತರಲಾಗಿದೆ ಎಂದು ಇಂದು ಅವರ ಸಂಬಂಧಿಕರು ಠಾಣೆಗೆ ಬಂದು ಪ್ರಶ್ನೆ ಮಾಡಿದ್ದರು. ಅಷ್ಟಕ್ಕೇ ಪೊಲೀಸರು ಅವರ ಮೇಲೆ ಲಾಠಿ ಬೀಸಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ, ಮಕ್ಕಳು ಹಾಗೂ ಮಹಿಳೆಯರಿಗೂ ಏಟು ಬಿದ್ದಿವೆ. ಇದರಿಂದ ಜನರು ಜಗಳೂರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.

 

.

 

 

error: Content is protected !!