ಉಪವಾಸದಿಂದ ಜೀವಂತ ಸಮಾಧಿಯಾದರೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದಿದ್ದ ಪಾದ್ರಿಯ ಜಮೀನಿನಲ್ಲಿ 90 ಶವಗಳು ಪತ್ತೆ!

(ನ್ಯೂಸ್ ಕಡಬ) newskadaba.com. ಕೀನ್ಯಾ,ಏ.26. ಉಪವಾಸವಿದ್ದು, ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗುತ್ತೆ,ಏಸುವನ್ನು ಭೇಟಿಯಾಗಬಹುದು ಎಂದು ಪಾದ್ರಿ ಹೇಳಿದ ಮಾತನ್ನು ನಂಬಿ ಹಲವರು ಜೀವಂತ ಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ.  ಕೀನ್ಯಾದಲ್ಲಿ ಈ ಘಟನೆ ನಡೆದಿದ್ದು ಇಲ್ಲಿಯವರೆಗೆ ಸುಮಾರು 90 ಶವಗಳು ಪಾದ್ರಿಯ ಜಮೀನಿನಲ್ಲಿ ಸಿಕ್ಕಿರುವ ಬಗ್ಗೆ ವರದಿಯಾಗಿದೆ.

ಪಾದ್ರಿಯ ಜಮೀನಿನಿಂದ ಶವಗಳು ಸಿಗುತ್ತಿದೆ.ಆಸ್ಪತ್ರೆಯ ಶವಾಗಾರಗಳು ತುಂಬಿವೆ.ಶವ ಪರೀಕ್ಷೆ ಪೂರ್ಣಗೊಳ್ಳುವವರೆಗೆ ನಾಲ್ಕು ದಿನ ಬಿಡುವು ತೆಗೆದುಕೊಂಡು ಮತ್ತೆ ಜಮೀನಿನಲ್ಲಿ ಹುಡುಕಾಟ ನಡೆಸಲಾಗುತ್ತದೆ ಎನ್ನಲಾಗಿದೆ.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸರಳ ಶ್ರೀಕೃಷ್ಣಾಷ್ಟಮಿ

ಘಟನೆಯ ಬೆನ್ನಲ್ಲೇ ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ.ತನಿಖೆಯ ವೇಳೆ ಆತ್ಮಹತ್ಯೆಗೆ ಪ್ರೇರೇಪಿಸಲಿಲ್ಲ ಎಂದು ಅವರು ಹೇಳಿದ್ದಾರೆ. 2019ರಲ್ಲೇ ಚರ್ಚ್ ನ್ನು ಮುಚ್ಚಲಾಗಿದೆ ಎಂದಿದ್ದಾರೆ. ಪೊಲೀಸರು ಈಗ ಎಲ್ಲಾ ದೇಹಗಳ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

 

error: Content is protected !!
Scroll to Top