ಮಂಗಳೂರು: ಪುತ್ರಿಯರಿಂದ ಅತ್ಯಾಚಾರ ಆರೋಪ ➤ ಆರೋಪಿ ತಂದೆ ಖುಲಾಸೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.25. ತಮ್ಮ ತಂದೆಯ ವಿರುದ್ದ ಪುತ್ರಿಯರು ಆರೋಪ ಮಾಡಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.


ಕಾಟಿಪಳ್ಳದ ನಿವಾಸಿ ಅಬ್ದುಲ್‌ ಹಕೀಂ(48) ಖುಲಾಸೆಗೊಂಡ ಆರೋಪಿ ಎಂದು ಗುರುತಿಸಲಾಗಿದೆ. ತಾವು ಅಪ್ರಾಪ್ತರಾಗಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ತಂದೆ ಅತ್ಯಾಚಾರ ಎಸಗಿರುವ ಬಗ್ಗೆ ಇಬ್ಬರು ಮಕ್ಕಳು ಮಂಗಳೂರಿನ ಮಹಿಳಾ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ಈ ಪೈಕಿ ಕಿರಿಯ ಮಗಳ ಆರೋಪ ಪ್ರಕರಣದಲ್ಲಿ ನ್ಯಾಯಾಲಯ ಎರಡು ತಿಂಗಳ ಹಿಂದೆ ಆರೋಪಿಯನ್ನು ಖುಲಾಸೆಗೊಳಿಸಿತ್ತು.

Scroll to Top