ಬಿಸಿಎಂ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ..!   ➤ ಪ್ರಕರಣ ದಾಖಲು.!

(ನ್ಯೂಸ್ ಕಡಬ)Newskadaba.comಲಬುರಗಿ,ಏ.23  ಜೇವರ್ಗಿ ಪಟ್ಟಣದಲ್ಲಿನ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯನ್ನು ಸಿದ್ದುಪ್ರಸಾದ್ ಶಹಾಪುರ (23) ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿ ಜೇವರ್ಗಿ ತಾಲೂಕಿನ ಬೀರಾಳ ಬಿ ಗ್ರಾಮದ ನಿವಾಸಿ. ಬಿಕಾಂ ಮುಗಿದು ಎರಡು ವರ್ಷ ಆಗಿದೆ,ಹಾಸ್ಟೆಲ್ ನ ಹಳೆಯ ವಿದ್ಯಾರ್ಥಿ ಆಗಿದ್ದ ಎನ್ನಲಾಗಿದೆ. ಆರ್ಥಿಕ ಸಮಸ್ಯೆ ಇರುವುದರಿಂದ ಹಾಸ್ಟೆಲ್ ನಲ್ಲಿ ವಾಸವಾಗಿದ್ದ. ಕುಟುಂಬದ ಮೂಲಗಳ ಪ್ರಕಾರ ಸಾಲ ಮಾಡಿಕೊಂಡಿದ್ದ.

Also Read  ಪ್ರೀತಂ ಗೌಡ ಎಷ್ಟೇ ಹಣ ಖರ್ಚು ಮಾಡಿದರೂ ಆತನ ಸೋಲನ್ನು ನಾನು ಕಣ್ಣಿನಿಂದ ನೋಡಬೇಕು...! ➤ಎಚ್.ಡಿ. ದೇವೇಗೌಡ

ಮೂರು ದಿನಗಳ ಹಿಂದೆ ಸುಮಾರು ಮೂರು ಲಕ್ಷ ಸಾಲವನ್ನು ಕುಟುಂಬ ಸದಸ್ಯರು ಕಟ್ಟಿದ್ದರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.

 

 

error: Content is protected !!
Scroll to Top